ಆನ್‍ಲೈನ್ ಗೇಮ್‍ನಲ್ಲಿ ಈತ ಗೆದ್ದಿದ್ದು ಬರೋಬ್ಬರಿ 7.7 ಕೋಟಿ..!

ತಂತ್ರಜ್ಞಾನ ಮುಂದುವರೆದಷ್ಟು ಅದರಿಂದ ಅನುಕೂಲವೂ ಇದೆ, ಅನಾನೂಕೂಲವೂ ಇದೆ, ಅದನ್ನು ಚೆನ್ನಾಗಿ ಬಳಸಿಕೊಂಡರೆ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬಹದು, ಇತ್ತಿಚಿನ ದಿನಗಳಲ್ಲಿ ಮಕ್ಕಳು ಆನ್‍ಲೈನ್, ಕಂಪ್ಯೂಟರ್, ಮೊಬೈಲ್, ಗೇಮ್ ಹೀಗೆ ಅದರ ದಾಸಕ್ಕೆ ಸಿಲುಕಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೋಬ್ಬ ಹುಡುಗ ಆನ್‍ಲೈನ್ ಗೇಮ್ ಮೂಲಕಾನೇ ಕೋಟಿ ಕೋಟಿ ಹಣವನ್ನು ಸಂಪಾದಿಸಿದ್ದಾನೆ. ಆತ ಗೆದ್ದಿರೋದು ಬರೋಬ್ಬರಿ 7.7ಕೋಟಿ.


ಹೌದು ಅಮೇರಿಕಾದ ನ್ಯೂಯಾರ್ಕ್‍ನ ಆಥರ್ ಆ್ಯಶ್ ಸ್ಟೇಡಿಯಂನಲ್ಲಿ ನಡೆದ ಫೋರ್ಟ್‍ನೈಟ್ ವಿಶ್ವಕಪ್‍ನಲ್ಲಿ 15ವರ್ಷದ ಜೇಡನ್ ಎಂಬ ಹುಡುಗ ಭಾಗವಹಿಸಿದ್ದ. ಸತತ ಮೂರು ದಿನಗಳ ಕಾಾಲ ಈತ ಈ ಪಂದ್ಯದಲ್ಲಿ ತನ್ನ ಪಾರ್ಟನರ್ ಡಚ್‍ನ ಡೇವ್ ಜೊತೆಗೂಡಿ ಈ ಆಟದಲ್ಲಿ ಎರಡನೇ ಸ್ಥಾನ ಗಳಿಸಿಕೊಂಡಿದ್ದಾರೆ. ಅಲ್ಲದೇ ಈ ಆಟದಲ್ಲಿ ಬಂದ ಬಹುಮಾನದ ಮೊತ್ತವನ್ನು ಇಬ್ಬರು ಸರಿಸಮನಾಗಿ ಹಂಚಿಕೊಂಡಿದ್ದಾರೆ. ಆಗ ಜೇಡನ್‍ಗೆ ಸಿಕ್ಕಿರುವ ಮೊತ್ತ ಬರೋಬ್ಬರಿ 7.7ಕೋಟಿ ರೂಪಾಯಿಗಳು. ಜೇಡನ್ ಹೇಳುವಂತೆ ಆಟ ಆಡೋದನ್ನು ಯಾರು ದ್ವೇಷಿಸುವುದಿಲ್ಲ, ನಾನು ನನ್ನ ರೂಮ್‍ನಲ್ಲಿ 8ಗಂಟೆಗಳ ಕಾಲ ಸುಮ್ಮನೆ ಕೂರುತ್ತಿರಲಿಲ್ಲ, ಈ ಆನ್‍ಲೈನ್ ಗೇಮ್ ನನಗೆ ಅದೃಷ್ಟ ತಂದುಕೊಟ್ಟಿದೆ ಅಂತ ಹೇಳಿದ್ದಾನೆ, ಆದ್ರೆ ಈ ರೀತಿ ಅದೃಷ್ಟ ಎಲ್ಲರಿಗೂ ತಂದು ಕೊಡಲಿದೆ ಎಂದು ಹೇಳಲಾಗದು, ಸಾಕಷ್ಟು ಅನಾಹುತಗಳೂ ಆಗಿರೋದು ನಮ್ಮ ಕಣ್ಣ ಮುಂದೆಯೇ ಇವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್ ಬಳಕೆ ಬಗ್ಗೆ ಹೆಚ್ಚಿನ ಗಮನ ಹರಿಸೋದು ಒಳ್ಳೆಯದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top