ಆಟೋ ಡ್ರೈವರ್‌ ಮಗ ಈಗ ಐಪಿಎಲ್‌ನಲ್ಲಿ ಹೀರೋ..

ಮೊಹಮ್ಮದ್‌ ಸಿರಾಜ್‌ ಸದ್ಯ ನಿನ್ನೆಯಿಂದ ತನ್ನ ಬಗ್ಗೆ ಐಪಿಎಲ್‌ ವಿಚಾರವಾಗಿ ಟ್ರೋಲ್‌,ಟೀಕೆ, ಹಾಸ್ಯ ಮಾಡುತ್ತಿದ್ದವರಿಗೆ ಉತ್ತರ ಕೊಡುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದುಕೊಳ್ಳುವಂತೆ ಮಾಡಿದ ಆಟಗಾರ, ಯಾವುದೇ ಒಬ್ಬ ಮನುಷ್ಯನಿಗೆ ಒಂದು ಟೈಂ ಬರುತ್ತೆ, ಆ ಟೈಂ ಬರೋವರೆಗೂ ಪ್ರಯತ್ನ,ಶ್ರಮ ಇವೆರಡನ್ನು ಬಿಡದೆ ಮುನ್ನುಗ್ಗುತ್ತಿದ್ದರೆ ಪ್ರತಿಫಲ ಸಿಗಲಿದೆ ಅನ್ನೋದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಆಗಿದ್ದಾರೆ ಮೊಹಮ್ಮದ್‌ ಸಿರಾಜ್‌, ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಗೆಲುವಿನ ರೂವಾರಿಯಾಗಿರೋ ಸದ್ಯ ಐಪಿಎಲ್‌ ಹೀರೋ ಮೊಹಮ್ಮದ್‌ ಸಿರಾಟ್‌ ಒಬ್ಬ ಆಟೋ ಡ್ರೈವರ್‌ ಮಗನಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದು ಹೇಗೆ ಗೊತ್ತಾ.

ಆಟೋ ಚಾಲಕರಾದ ಮಹಮ್ಮದ್‌ ಗೌಸ್‌ ಮತ್ತು ಶಬನಾ ಬೇಗಮ್‌ ಅವರ ಮನಗನಾಗಿರೋ ಸಿರಾಜ್‌ ತಂದೆ ತಾಯಿಗೆ ಒಂದೊಳ್ಳೆ ಮನೆ ಕಟ್ಟಿಸಿಕೊಡಬೇಕು ಅನ್ನೋ ಸಲುವಾಗಿ ಐಪಿಎಲ್‌ ಬಂದವರು, ಐಪಿಎಲ್‌ನಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರೋ ಸಿರಾಜ್‌ ಪ್ರತಿಭೆ ಸರಿಯಾಗಿ ಅನಾವರಣ ಆಗಿದ್ದು ಮಾತ್ರು 2020 ಅಕ್ಟೋಬರ್‌ 21ರಂದು.

ಸಿರಾಜ್‌ ಮೊದಲ ಬಾರಿಗೆ ಅವರನ್ನು ಐಪಿಎಲ್‌ಗೆ ಕರೆತಂದದ್ದು, ಪ್ರಥಮ ದರ್ಜೆಯಲ್ಲಿ ಅವರು ನೀಡಿದ ಪ್ರದರ್ಶನ, ಹೌದು ಪ್ರಥಮ ದರ್ಜೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿರಾಜ್‌ಗೆ ಇಂಡಿಯಾ ಎ ಮತ್ತು ರೆಸ್ಟ್‌ ಆಫ್‌ ಇಂಡಿಯಾದ ಭಾಗಿಲು ತೆರೆಯಿತು, ಇಲ್ಲಿ ಸಿರಾಜ್‌ ಪ್ರತಿಭೆಯನ್ನು ಗುರುತಿಸಿದ್ದು, ಸನ್‌ ರೈಸರ್ಸ್‌ ಹೈದರಾಬಾದ್‌ನ ಮೆಂಟರ್‌ ಆಗಿದ್ದ ವಿವಿಎಸ್‌ ಲಕ್ಷ್ಮಣ್‌, 20 ಲಕ್ಷದ ಮೂಲ ಬೆಲೆಯಿಂದ 2.6 ಕೋಟಿ ಬೆಲೆಗೆ ಹೈದರಬಾದ್‌ ತಂಡದ ಪಾಲಾದ ಸಿರಾಜ್‌ ಅಷ್ಟೇನೂ ಸಕ್ಸಸ್‌ ಕಾಣಲಿಲ್ಲ ನಂತರ ಆರ್‌ಸಿಬಿ ತಂಡ ಸೇರಿಕೊಂಡ ಸಿರಾಜ್‌ಗೆ ಅವಕಾಶಗಳು ಕಮ್ಮಿ ಆದ್ರು ಸಿಕ್ಕ ಅವಕಾಶದಲ್ಲಿ ಪ್ರದರ್ಶನ ಕಾಣಲು ಸ್ವಲ್ಪ ಮಟ್ಟಿನ ವಿಫಲವನ್ನು ಕಂಡಿದ್ದರು. ಇದೀಗ ತಾನೋಬ್ಬ ಉತ್ತಮ ಬೌಲರ್‌ ಅನ್ನೋದನ್ನ ತೋರಿಸಿದ್ದು ಆ ಮೂಲಕ ರನ್‌ ಹೊಡೆಸಿಕೊಂಡಾಗಲೆಲ್ಲ ಟ್ರೋಲ್‌, ಟೀಕೆ ಮಾಡುತ್ತಿದ್ದವರಿಗೆ ತಕ್ಕ ಉತ್ತರವನ್ನು ನೀದ್ದಾರೆ.

ಆಟೋ ಡ್ರೈವರ್‌ ಮಗನಾಗಿ ಈ ಮಟ್ಟದಲ್ಲಿ ಸಾಧನೆ ಮಾಡಿರೋ ಸಿರಾಜ್‌ ಈ ಯಶಸ್ಸಿಗೆ ತನ್ನ ತಂದೆ ಮತ್ತು ತಾಯಿಯ ತ್ಯಾಗ ಪ್ರೀತಿಯೇ ಕಾರಣ ಅಂತ ಹೇಳ್ತಾರೆ. ತಂದೆ ರಿಕ್ಷಾ ಓಡಿಸುತ್ತಿದ್ದರು, ನನ್ನ ಮೇಲೆ ಕಷ್ಟದ ನೆರಳು ಬೀಳಬಾರದು ಎಂದು ನನ್ನ ನೋಡಿಕೊಂಡಿದ್ದಾರೆ. ಹೀಗಾಗಿ ನಾನು ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ತೋರಲು ಸಾಧ್ಯವಾಯಿತು ಎಂದು ತಂದೆ ತಾಯಿಯ ತ್ಯಾಗದ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಅಣ್ಣ ಸಾಫ್ಟ್‌ ವೇರ್‌ ಕಂಪನಿಯಲ್ಲಿ ಕೆಲಸಮಾಡುತ್ತಿದ್ದು, ಅವನ ರೀತಿ ಕೆಲಸಕ್ಕೆ ಹೋಗಬೇಕು ಅನ್ನೋದು ನನ್ನ ತಾಯಿಯ ಆಸೆಯಾಗಿತ್ತು, ಆದ್ರೆ ನನಗೆ ಓದಿಗಿಂತ ಕ್ರೀಡೆಯಲ್ಲಿ ಆಸಕ್ತಿ ಜಾಸ್ತಿ ಇತ್ತು, ಆದ್ರೆ ಈಗ ನನ್ನ ತಾಯಿ ನನ್ನ ಬಗ್ಗೆ ಹೆಮ್ಮೆಯಿಂದ ಮನೆಯ ವಠಾರದಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಳೇಯ ನೆನಪುಗಳನ್ನು ಮೆಲುಕು ಹಾಕಿರೋ ಸಿರಾಜ್‌ ತಾವು 25 ಓವರ್‌ಗಳ ಕ್ಲಬ್‌ ಮ್ಯಾಚ್‌ನಲ್ಲಿ 20ರನ್ನಿಗೆ 9 ವಿಕೆಟ್‌ಗಳನ್ನು ಕಿತ್ತಾಗ ನನ್ನ ಚಿಕ್ಕಪ್ಪ ನನಗೆ 500 ರೂಪಾಯಿ ಬಹುಮಾನವನ್ನು ನೀಡಿದ್ರು. ಇದು ನನ್ನ ಜೀವನದ ದೊಡ್ಡ ಬಹುಮಾನವಾಗಿತ್ತು. ಆದಾದ ಮೇಲೆ ಐಪಿಎಲ್‌ ಹರಾಜಿನಲ್ಲಿ ಅಯ್ಕೆಯಾಗಿದ್ದು ಮರೆಯಾಲಾಗದ ಕ್ಷಣ ಅಂತ ಹಳೇಯ ನೆನಪುಗಳನ್ನು ಸ್ಮರಿಸುತ್ತಾರೆ.

ಟೆನ್ನಿಸ್‌ ಬಾಲ್‌ ಆಗಿ ಬೆಳೆಯುತ್ತಿದ್ದ ಸಿರಾಜ್‌ ಮೊದಲ ಬಾರಿಗೆ ಲೆದರ್‌ ಬಾಲ್‌ ಆಡಲು ಶುರುಮಾಡಿದ್ದು2015ರಲ್ಲಿ ಆ ನಂತರ ಹೈದರಬಾದ್‌ನ ಅಂಡರ್‌ 22, ಮುಷ್ತಾಕ್‌ ಅಲಿ,ವಿಜಯ್‌ ಹಜಾರೆ, ರಣಜಿ ಟ್ರೋಫಿಯಲ್ಲಿ ಆಡಿ ಆಯ್ಕೆಗಾರರ ಗಮನ ಸೆಳೆದು ಟೀಂ ಇಂಡಿಯಾಗೂ ಆಯ್ಕೆಯಾಗಿದ್ದರು.

ಸದ್ಯ 2.20 ಕೋಟಿಗೆ ಆರ್‌ಸಿಬಿ ಪರ ಆಡುತ್ತಿರೋ ಸಿರಾಜ್‌ 30 ಪಂದ್ಯದಲ್ಲಿ 34 ವಿಕೆಟ್‌ ಪಡೆದಿದ್ದು 32/4 ಮತ್ತು 8/3 ವಿಕೆಟ್‌ ಪಡೆದಿರೋದು ಇವರ ಬೆಸ್ಟ್‌ ಬೌಲಿಂಗ್‌ ಆಗಿದೆ. ಕಳೆದ ಐಪಿಎಲ್‌ ವರೆಗೂ ದುಬಾರಿ ಎಕಾನಾಮಿಕ್‌ ಬೌಲರ್‌ ಅಂದ್ರೆ ಪ್ರತಿ ಓವರ್‌ನಲ್ಲಿ 9.02ರನ್‌ ನೀಡುವ ಮೂಲಕ ದುಬಾರಿ ಬೌಲರ್‌ ಎಂದು ಟ್ರೋಲಿಗಳ ಮತ್ತುಟೀಕಾರರ ಬಾಯಿಗೆ ಆಹಾರವಾಗಿದ್ದ ಮೊಹಮ್ಮದ್‌ ಸಿರಾಜ್‌ ಈ ಐಪಿಎಲ್‌ನಲ್ಲಿ 7.85 ಎಕನಾಮಿ ಕಾಪಾಡಿಕೊಂಡು ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

ಮೊಹಮ್ಮದ್‌ ಸಿರಾಜ್‌ ಅವರ ಐಪಿಎಲ್‌ನಲ್ಲಿನ ಈ ಸಾಧನೆ ಬಗ್ಗೆ ಏನ್‌ ಹೇಳ್ತೀರಾ..ಟ್ರೋಲಿಗರ, ಟೀಕಾಕಾರ ತಕ್ಕ ಉತ್ತರ ನೀಡಿದ್ದಾರ ಸಿರಾಜ್‌ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top