ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌

ನಟ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಈಗಾಗ್ಲೇ ಅಭಿಮಾನಿಗಳಿಗೆ ಮನವಿಮಾಡಿಕೊಂಡಿರೋ ಧ್ರುವ ಈ ಬಾರಿ ಯಾರು ಹುಟ್ಟು ಹಬ್ಬ ಆಚರಿಸಲು ಯಾರು ಮನೆಯ ಹತ್ತಿರ ಬರದೆ ನೀವೀರುವ ಜಾಗದಿಂದಲೇ ಹಾರೈಸಿ ಎಂದು ಹೇಳಿದ್ದಾರೆ. ಅಣ್ಣನ ನಿಧನ ಮತ್ತು ಕೊರೋನಾ ಸಮಸ್ಯೆ ಇರೋದ್ರಿಂದಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿರೋ ಧ್ರುವ ಸರ್ಜಾ , ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈಗಾಗಲೇ ಪೊಗರು ಚಿತ್ರದ ಮೂಲಕ ದೊಡ್ಡ ಹವಾ ಕ್ರಿಯೇಟ್‌ ಮಾಡಿರೋ ಜೋಡಿ ಧ್ರವ ಸರ್ಜಾ ಮತ್ತು ನಂದಕಿಶೋರ್‌, ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದೆ.

ಈಗಾಗಲೇ ಪೊಗರು ಸಿನಿಮಾ ದೊಡ್ಡ ಹೈಪ್‌ ಕ್ರಿಯೆಟ್‌ ಆಗಿದ್ದು, ಸಿನಿಮಾ ರಿಲೀಸ್‌ಗೂ ಮುಂಚೆಯೇ ಧ್ರುವ ಬರ್ತ್‌ಡೇ ದಿನವೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಸದ್ಯ ಡಿಎಸ್‌ 5 ಎಂದು ಹೆಸರಿಟ್ಟಿದ್ದು, ಈ ಚಿತ್ರವನ್ನು ಉದಯ್‌ ಮೆಹ್ತಾ ನಿರ್ಮಾಣ ಮಾಡ್ತಾ ಇದ್ದಾರೆ. ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾಗಾಗಿ ಕಾಯ್ತಾ ಧ್ರುವ ಅಭಿಮಾನಿಗಳಿಗೆ ಧ್ರುವ ಸರ್ಜಾ ಬರ್ತ್‌ ಡೇ ದಿನ ಸಿಹಿಸುದ್ದಿಯನ್ನು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top