ಆಂಟಿಯರ ಕೆಟ್ಟ ಆಸೆಗೆ ಬಲಿಯಾಯ್ತು 4 ವರ್ಷದ ಪುಟ್ಟ ಬಾಲಕಿಯ ಜೀವ..!

ಚಿನ್ನದ ಆಸೆಗೆ ಬಿದ್ದು ಪುಟ್ಟ ಬಾಲಕಿಯ ಜೀವವನ್ನೇ ತೆಗೆದ ಧಾರುಣ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. 4ವರ್ಷದ ಬಾಲಕಿ ಬಳಿ ಇದ್ದ ಕಿವಿ ಓಲೆಯ ಆಸೆಗೆ ಬಿದ್ದ ಆಂಟಿಯರು ಈ ಕೃತ್ಯ ನಡೆಸಿದ್ದಾರೆ. ಖಾರ್‌ ಗ್ರಾಮದ ವಾಸಿಗಳಾದ ಈ ಮಹಿಳೆಯರು ತಮ್ಮ ಪಕ್ಕದ ಮನೆಯ ಪುಟ್ಟ ಕಂದನ ಕಿವಿಯಲ್ಲಿದ್ದ ಬಂಗಾರ ಓಲೆ ಆಸೆ ಪಟ್ಟು ಪುಟ್ಟ ಜೀವವನ್ನೇ ಬಲಿ ಪಡೆದಿದ್ದಾರೆ.

ಮಂಗಳವಾರ ಆಟವಾಡುತ್ತಿದ್ದ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು ಮನೆಯವರು ಎಲ್ಲಾ ಕಡೆ ಹುಡುಕಿದ್ರು ಬಾಲಕಿಯ ಸುಳಿವು ಸಿಗದಿದ್ದಾಗ, ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದರು, ಆದರೆ ಬುಧವಾರ ಬಾಲಕಿ ರಕ್ತಸಿಕ್ತವಾಗಿ ಸಾವನಪ್ಪಿದ್ದ ದೇಹ ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಆರೋಪಿ ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಇನ್ನು ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಮಹಿಳೆಯರು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಬಾಲಕಿಯ ಕಿವಿಯಲ್ಲಿದ್ದ ಬಂಗಾರದ ಓಲೆಯ ಆಸೆಗಾಗಿ ಆಕೆಯನ್ನು ಕೊಲೆ ಮಾಡಿದೆವು ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಘಟನೆಯಲ್ಲಿ ಬೇರೆಯಾರು ಇಲ್ಲ ನಾವು ಕೇವಲ ಕಿವಿ ಓಲೆಗಾಗಿ ಈ ರೀತಿ ಮಾಡಿದೆವು ಅಂತ ಮಹಿಳೆಯರು ಒಪ್ಪಿಕೊಂಡಿದ್ದು ಸದ್ಯ ಮಹಿಳೆಯರು ಪೊಲೀಸ್‌ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top