ಅಮೇರಿಕಾ ಸರ್ಕಾರಿ ಶಾಲೆಯಲ್ಲಿ ಅಧಿಕೃತವಾಗಿ ಕನ್ನಡ ಕಲಿಕೆ..

ಕರ್ನಾಟದಲ್ಲಿಯೇ ಅದೆಷ್ಟೋ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಮಾಡಲು ಹಿಂದು ಮುಂದು ನೋಡುತ್ತಿದ್ದಾರೆ. ಇನ್ನು ಸರ್ಕಾರಿ ಶಾಲೆಗಳಂತೂ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಶಾಲೆಯನ್ನೇ ಮುಚ್ಚುವ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ಹೀಗಿರಬೇಕಾದ್ರೆ ದೂರದ ಅಮೇರಿಕಾದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ನಡವನ್ನು ಅಧಿಕೃತವಾಗಿ ಕನ್ನಡ ಕಲಿಸಲು ಅನುಮತಿ ದೊರೆತಿದೆ. ಹೌದು ಅಮೆರಿಕಾದ ಸರಾರಿ ಹೈಸ್ಕೂಲ್‌ಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ವಿದೇಶಿ ಭಾಷೆಯಾಗಿ ಮಕ್ಕಳಿಗೆ ಕಲಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಸದ್ಯ ಸಾರ್ಥ್‌ ಕೆರೊಲಿನ ರಾಜ್ಯದ ವೇಕ್‌ಕೌಂಟಿ ಸರ್ಕಾರಿ ಸ್ಕೂಲ್‌ನಲ್ಲಿ ಕನ್ನಡವನ್ನು ವಿದೇಶಿ ಭಾಷೆಯಾಗಿ ಕಲಿಯಲು ಅವಕಾವನ್ನು ಮಾಡಿಕೊಡಲಾಗಿದೆ. ಅಮೇರಿಕಾದ ಕನ್ನಡ ಪ್ರೇಮಿಗಳ ಸತತ 15 ವರ್ಷಗಳ ಪ್ರಯತ್ನಿದಿಂದಾಗಿ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ಅಮೇರಿಕಾದ ಉಳಿದ ಭಾಗಗಲ್ಲಿ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ವಿದೇಶಿ ಭಾಷೆಯನ್ನಾಗಿ ಕಲಿಸಲು ಕನ್ನಡ ಅಕಾಡೆಮಿ ಪ್ರಯತ್ನ ಮಾಡಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top