ಅಮಿತಾಬ್‌ ಬಚ್ಚನ್‌ಗೆ ಮಗಳಾಗಿದ್ದಾರೆ ಸ್ಯಾಂಡಲ್‌ವುಡ್‌ ಕ್ರಶ್‌ ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸದ್ಯ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಟಾಪ್‌ ನಟಿಯಾಗಿ ಮುಂಚುತ್ತಿದ್ದಾರೆ. ಕನ್ನಡದಲ್ಲಿ ಬೆರಳೆಣಿಕೆಯ ಸಿನಿಮಾಗಳನ್ನು ಮಾಡಿದ್ರು, ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ವಿಜಯ್‌ ದೇವರಕೊಂಡ ಜೊತೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸಿ ಹಿಟ್‌ ಜೋಡಿ ಅಂತ ಅನಿಸಿಕೊಂಡಿದ್ದು, ನಂತರ ಮಹೇಶ್‌ ಬಾಬು ಜೊತೆಯಲ್ಲೂ ನಟಿಸಿ ಸೈ ಅನಿಸಿಕೊಂಡ್ರು, ಸದ್ಯ ತೆಲುಗು ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೊತೆಯಲ್ಲಿ ಪುಷ್ಪ ಸಿನಿಮಾದಲ್ಲೂ ಅಲ್ಲು ಅರ್ಜುನ್‌ಗೆ ಜೋಡಿಯಾಗಿದ್ರು, ಸದ್ಯ ತಮಿಳಿನಲ್ಲೂ ಸೌಂಡ್‌ ಮಾಡಲು ಸಹ ರೆಡಿಯಾಗಿದ್ದಾರೆ. ಹೀಗಿರಬೇಕಾದ್ರೆ ರಶ್ಮಿಕಾ ಮಂದಣ್ಣ ಸೌತ್‌ ಇಂಡಿಯಾ ಸಿನಿಮಾರಂಗದ ಜೊತೆಯಲ್ಲಿ ಬಾಲಿವುಡ್‌ನಲ್ಲೂ ಸೌಂಡ್‌ ಮಾಡೋದಾಗಿ ಹೇಳಿಕೊಂಡಿದ್ರು, ಹಿಂದಿ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ , ನಟ ಸಿದ್ಧಾರ್ಥ್‌ ಮಲ್ಹೋತ್ರ ನಾಯಕನಾಗಿ ನಟಿಸ್ತಾ ಇರೋ ಮಿಷನ್‌ ಮಜ್ನು ಚಿತ್ರದ ಮೂಲಕ ಬಾಲಿವುಡ್‌ ಸಿನಿಮಾ ಪಯಣಕ್ಕೆ ಅಣಿಯಾಗುತ್ತಿದ್ದಾರೆ. ಈಗತಾನೇ ಬಾಲಿವುಡ್‌ಗೆ ಕಾಲಿಡುತ್ತಿರೋ ರಶ್ಮಿಕಾ ಮಂದಣ್ಣಕ್ಕೆ ಬಾಲಿವುಡ್‌ನಲ್ಲೂ ಅದೃಷ್ಟದ ಬಾಗಿಲು ಬಹುಬೇಗನೇ ತೆರೆದುಕೊಂಡಿದೆ, ಹೌದು ಸದ್ಯ ಮಿಷನ್‌ ಮಜ್ನು ಸಿನಿಮಾ ಅನೌನ್ಸ್‌ ಆಗುತ್ತಿದ್ದಂತೆ ಮತ್ತೊಂದು ದೊಡ್ಡ ಸಿನಿಮಾದಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂದಿದೆ. ಬಾಲಿವುಡ್‌ಗೆ ಕಾಲಿಡುತ್ತಿದ್ದಂತೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್‌ ಬ ಚ್ಚನ್‌ ಜೊತೆಯಲ್ಲಿ ರಶ್ಮಿಕಾ ಮಂದಣ್ಣಗೆ ನಟಿಸಲು ಅವಕಾಶ ಲಭ್ಯವಾಗಿದೆ. ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮೂಲಕ ಸುದ್ದಿಯಾಗಿದ್ರು, ನಂತರ ಹಿಂದಿಯ ಆಲ್ಬಂ ಸಾಂಗ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಜೋರಾಗಿ ಓಡಾಡುತ್ತಿರುವಾಗಲೇ , ಇದೀಗ ಅಮಿತಾಬ್‌ ಬಚ್ಚನ್‌ ಜೊತೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ನಿರ್ದೇಶಕ ವಿಕಾಸ್‌ ಬಹ್ಲ್‌ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಅಮಿತಾಬ್‌ಗೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅಪ್ಪ ಮಗಳ ಕಥೆ ಹೊಂದಿರೋ ಈ ಚಿತ್ರಕ್ಕೆ ರಿಲಯನ್ಸ್‌ ಎಂಟರ್‌ಟೈನ್ಮೆಂಟ್‌ ಬಂಡವಾಳ ಹೂಡಿಕೆ ಮಾಡುತ್ತಿದೆ, ಇನ್ನು ಈ ಚಿತ್ರಕ್ಕೆ ಸದ್ಯ ಡೆಡ್ಲಿ ಅನ್ನೋ ಹೆಸರನ್ನು ಇಡಲಾಗಿದ್ದು, ಈ ಟೈಟಲ್‌ ಇನ್ನು ಫೈನಲ್‌ ಆಗಿಲ್ಲ. ಸದ್ಯ ಚಿತ್ರದ ಮಾತುಕತೆಗಳು ಮುಗಿದಿದ್ದು 2021ರ ಮಾರ್ಚ್‌ ತಿಂಗಳಿನಲ್ಲಿ ಚಿತ್ರ ಸೆಟ್ಟೆರಲಿದೆ.

ಕಿರಿಕ್‌ ಪಾರ್ಟಿ ಮೂಲಕ ಸ್ಯಾಂಡಲ್‌ವುಡ್‌ನ ಕ್ರಶ್‌ ಆಗಿ ಬೆಳೆದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಮೋಡಿ ಮಾಡ್ತಾ ಇದ್ದು, ಇದೀಗ ಬಾಲಿವುಡ್‌ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮ್ಮ ಬಾಲಿವುಡ್‌ ಎಂಟ್ರಿಯ ಮೊದಲ ಪ್ರಯತ್ನದಲ್ಲಿಯೇ ಅದೃಷ್ಟ ಖುಲಾಯಿಸಿದ್ದು, ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಯಾವ ರೀತಿ ಮೋಡಿ ಮಾಡಲಿದ್ದಾರೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top