ಅಭಿಷೇಕ್‌ ಬ್ಯಾಡ್‌ ಮ್ಯಾನರ್ಸ್‌ ನೀವ್‌ ನೋಡಿದ್ರ..

ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಅಮರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಭಿಷೇಕ್‌, ಸದ್ಯ ಬ್ಯಾಡ್‌ ಮ್ಯಾನರ್ಸ್‌ ಇಟ್ಕೊಂಡು ಗಾಂಧಿನಗರದಲ್ಲಿ ಹವಾ ತೋರಿಸೋಕೆ ರೆಡಿಯಾಗ್ತಿರೋದು ಮತ್ತು ಅಭಿಷೇಕ್‌ಗೆ ಬ್ಯಾಟ್‌ ಮ್ಯಾನರ್ಸ್‌ ಹೇಳಿಕೊಡ್ತಾ ಇರೋದು ಸುಕ್ಕಾ ಸೂರಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ, ಇನ್ನು ಈ ಚಿತ್ರದ ಶೂಟಿಂಗ್‌ ಹಂತ ಹಂತವಾಗಿ ಈಗಾಗಲೇ ಮಾಡ್ತಾ ಇದ್ದು, ಇವತ್ತು ಅಭಿಷೇಕ್‌ ಅಂಬರೀಷ್‌ ಅವ್ರ ಹುಟ್ಟುಹಬ್ಬದ ವಿಶೇಷವಾಗಿ ಸುಕ್ಕಾ ಸೂರಿ ಅಂಡ್‌ ಟೀಂ ಯಂಗ್‌ ರೆಬೆಲ್‌ ಸ್ಟಾರ್‌ ಒಂದು ಗಿಫ್ಟ್‌ ನೀಡಿದೆ.

ಬ್ಯಾಡ್‌ ಮ್ಯಾನರ್ಸ್‌ ಚಿತ್ರತಂಡದಿಂದ ಒಂದು ಪ್ರೋಮೋ ವಿಡಿಯೋ ರಿಲೀಸ್‌ ಮಾಡಿದ್ದು, ಚಿತ್ರದ ಒಂದು ತುಣುಕನ್ನು ರಿಲೀಸ್‌ ಮಾಡಿದ್ದಾರೆ. ರಗಡ್‌ ಲುಕ್‌ನಲ್ಲಿ ಕಾಣಿಸೋ ಅಭಿಷೇಕ್‌ ಒಂದು ಕಡೆ, ಇದು ಸಹ ಒಂದು ಪಕ್ಕಾ ಮಾಸ್‌ ಮತ್ತು ಸುಕ್ಕಾ ಸಿನಿಮಾ ಅನ್ನೋ ಫೀಲ್‌ ಕೊಡೋ ವಿಡಿಯೋ ಎರಡು ಸದ್ಯ ಸಿನಿರಸಿಕರಿಗೆ ಸಖತ್‌ ಥ್ರಿಲ್‌ ನೀಡಿದೆ. ಈಗಾಗಲೇ ವಿಡಿಯೋ ರಿಲೀಸ್‌ ಆಗಿದ್ದು, ಅಭಿಷೇಕ್‌ ಅಭಿಮಾನಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ.

ಇನ್ನು ವಿಡಿಯೋ ಜೊತೆಯಲ್ಲಿ ಅಭಿಷೇಕ್‌ ಬ್ಯಾಡ್‌ಮ್ಯಾನರ್ಸ್‌ ಲುಕ್‌ ಕೂಡ ಬಿಡುಗಡೆ ಮಾಡಿದ್ದು, ಸಿನಿರಸಿಕರ ಕ್ಯೂರ್ಯಾಸಿಟಿ ಹೆಚ್ಚಿಸಿದೆ. ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು, ನಮ್‌ ಕಡೆಯಿಂದಾನೂ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ಗೆ ಬರ್ತ್‌ಡೇ ವಿಶ್‌ ಹೇಳೋಣ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top