ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಚಂದನ್‌ ಶೆಟ್ಟಿ ನಿವೇದಿತಾ ಗೌಡ..

ಮೂರೇ ಮೂರೇ ಪೆಗ್ಗಲ್ಲಿ ಕಿಕ್‌ ಏರಿಸಿದ್ದ ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ ಸದ್ಯ ರ್ಯಾಪ್‌ ಸಾಂಗ್‌ ಪ್ರಿಯರ ಹಾಡ್‌ ಫೇವರೇಟ್‌, ಕನ್ನಡಿಗರು ಸದ್ಯ ಪಾರ್ಟಿಗಳಲ್ಲಿ ಚಂದನ್‌ ಶೆಟ್ಟಿ ಹಾಡು ಇತ್ತು ಅಂದ್ರೆ ಸಖತ್‌ ಎಂಜಾಯ್‌ ಮಾಡಿಕೊಂಡು ಪಾರ್ಟಿ ಮಾಡ್ತಾರೆ.ಈಗಾಗಲೇ ರ್ಯಾಪ್‌ ಸಾಂಗ್‌ ಜೊತೆಯಲ್ಲಿ ಕನ್ನಡ ಸಿನಿಮಾಗಳಲ್ಲೂ ಮ್ಯೂಸಿಕ್‌ ಬಾರಿಸೋ ಮೂಲಕ ಸೌಂಡ್‌ ಮಾಡ್ತಾ ಇರೋ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್‌ ಆಗಿ ಬಂದ ನಂತರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಜೊತೆ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಅವರನ್ನು ಮದುವೆಯಾಗಿ ಸಂಸಾರಿಯಾಗಿದ್ದಾರೆ. ಇದೀಗ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಹಾಗಾಂತ ಸಂತಸದ ಸುದ್ದಿ ಅಂದ ತಕ್ಷಣ ಚಂದನ್‌ ತಂದೆ ಆಗ್ತಿದ್ದಾರಾ ಅಂತ ಅಂದು ಕೊಳ್ಳ ಬೇಡಿ, ವಿಷಯ ಬೇರೇನೇ ಇದೆ. ಹೌದು ಚಂದನ್‌ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಆಗಿ , ಚಿತ್ರ ಸಾಹಿತಿಯಾಗಿ ಗಾಯಕನಾಗಿ, ರ್ಯಾಪರ್‌ ಆಗಿ ಒಂದಿಷ್ಟು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಚಂದನ್‌ ಶೆಟ್ಟಿ ಪ್ರಮೋಷನ್‌ ಹೊಂದುತ್ತಿದ್ದಾರೆ ಅದು ಹೀರೋ ಆಗಿ.

ಹೌದು ಚಂದನ್‌ ಶೆಟ್ಟಿ ಹೀರೋ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚೋದಕ್ಕೆ ರೆಡಿಯಾಗುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ತಯಾರಿಯನ್ನು ನಡೆಸುತ್ತಿದ್ದಾರೆ. ಇನ್ನು ಬಿಗ್‌ಬಾಸ್‌ ವಿನ್ನರ್‌ ಆದಾಗಲೇ ಚಂದನ್‌ ಹೀರೋ ಆಗಲಿದ್ದಾರೆ ಅನ್ನೋ ಮಾತುಗಳಿತ್ತು, ಅದಕ್ಕೆ ಇದೀಗ ಕಾಲ ಕೂಡ ಬಂದಿದೆ. ಸದ್ಯ ಈ ವಿಚಾರವಾಗಿ ಚಂದನ್‌ ಶೆಟ್ಟಿ ಮಾಹಿತಿ ಬಿಟ್ಟುಕೊಟ್ಟಿದ್ದು, ಚಂದನ್‌ ಶೆಟ್ಟಿಗೆ ನಾಯಕಿಯಾಗಿ ನಿವೇದಿತಾ ಗೌಡ ಅವರೇ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ಚಂದನ್‌ ಶೆಟ್ಟಿ ನ್ಯೂ ಇಯರ್‌ಗಾಗಿ ʻ ಪಾರ್ಟಿ ಫ್ರೀಕ್‌ʼ ಅನ್ನೋ ಹಾಡನ್ನು ರೆಡಿಮಾಡ್ತಾ ಇದ್ದು, ಇದರಲ್ಲಿ ಚಂದನ್‌ ಜೊತೆ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಾಡಿನಲ್ಲೂ ನಿವೇದಿತಾ ಗೌಡ ಕಾಣಿಸಿಕೊಂಡಿರೋದು ವಿಶೇಷ ಡಿಸೆಂಬರ್‌ 31ಕ್ಕೆ ʻಪಾರ್ಟಿ ಫ್ರೀಕ್‌ʼ ಹಾಡು ರಿಲೀಸ್‌ ಆಗಲಿದ್ದು, ಆ ನಂತರವಷ್ಟೇ ಚಂದನ್‌ ಹೀರೋ ಆಗಿ ನಟಿಸ್ತಾ ಇರೋ ಸಿನಿಮಾದ ಬಗ್ಗೆ ಮಾಹಿತಿಗಳು ಹೊರಬೀಳಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top