ಅಪ್ಪು ಜೊತೆ ನಟಿಸಲು ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ..!

ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ ಮುಂದಿನ ಸಿನಿಮಾ ಯಾವ್ದು ಅನ್ನೋರಿಗೆ ಈಗಾಗಲೇ ಉತ್ತರ ಸಿಕ್ಕಿದೆ..ಅಪ್ಪು ಯುವರತ್ನ ಚಿತ್ರದ ನಂತರ ಚೇತನ್ ನಿರ್ದೇಶನದ `ಜೇಮ್ಸ್’ ಚಿತ್ರ ಬರಲಿದ್ದು ಇದಕ್ಕಾಗಿ ಚಿತ್ರತಂಡ ಈಗ ಭರ್ಜರಿ ತಯಾರಿಯನ್ನು ಮಾಡಿಕೊಂಡಿದೆ. ಆದ್ರೆ ಈ ಬಾರಿ ತಯಾರಿ ಜೊತೆಯಲ್ಲೂ ಸಿನಿಮಾದಲ್ಲಿ ನಟಿಸಲು ಆಸಕ್ತಿರರೋರಿಗೂ ತಯಾರಿ ನಡೆಸಿಕೊಳ್ಳು ಚಿತ್ರತಂಡ ಹೇಳಿದೆ.ಹೌದು ನಿಮಗೆ ನಟೆಯಲ್ಲಿ ಆಸಕ್ತಿ ಇದ್ದರೆ ನೀವೂ ಕೂಡ ಪುನೀತ್ ರಾಜ್‍ಕುಮಾರ್ ಜೊತೆ ಅಭಿನಯಿಸ ಬಹುದಾಗಿದೆ..ಅದಕ್ಕಾಗಿ ಜೇಮ್ಸ್ ಚಿತ್ರತಂಡ ಆಡೀಷನ್ ಕೂಡ ಕರೆದಿದೆ.. ಇಲ್ಲಿ 5 ರಿಂದ 12 ವರ್ಷದ ಮಕ್ಕಳು ಭಾಗವಹಿಸಬಹುದು.ಜೊತೆಗೆ 16ರಿಂದ 45ವಯ್ಸಿನವರು ಕೂಡ ಈ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮಹಿಳೆಯರು ಹಾಗೂ ಪುರುಷರು ಇಬ್ಬರು ಈ ಆಡಿಷನ್‍ನಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕಾಗಿ ನೀವೂ ಮಾಡಬೇಕಾಗಿರೋದು ಇಷೇ,ನೀವೂ ನಟನೆ ಮಾಡಿರೋ ಒಂದು ನಿಮಿಷದ ವಿಡಿಯೋವನ್ನ ವಾಟ್ಸಾಪ್ ಮಾಡಿದ್ರೆ ಆಯ್ತು,ನೀವೂ ಇದರ ಜೊತೆಯಲ್ಲಿ ನಿಮ್ಮ ನಾಲ್ಕು ಪೋಟೋವನ್ನು ಸಹ ಕಳುಹಿಸಬೇಕು….(Left and Right and full length photo ) ಆದ್ರೆ ಈ ವಿಡಿಯೋವನ್ನು ನೀವೂ ಕಳುಹಿಸುವಾಗ ನಿಮ್ಮ ಟಿಕ್ ವಿಡಿಯೋವಾಗಲಿ, ಸೆಲ್ಫಿ ಫೋಟೋಗಳನ್ನು ಕಳುಹಿಸುವ ಹಾಗಿಲ್ಲ ಅಂತ ಚಿತ್ರತಂಡ ಹೇಳಿದೆ. ಇನ್ನು ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಮಾಡ್ತಾ ಇದ್ದು, ಕಿಶೋರ್ ಪ್ರೊಡಕ್ಷನ್‍ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top