
ಕೋವಿಡ್ 19ನಿಂದಾಗಿ ಸಿನಿರಸಿಕರು ಸಿನಿಮಾಗಳನ್ನು ಥಿಯೇಟರ್ನಲ್ಲಿ ನೋಡುವ ಅವಕಾಶವನ್ನು ಮಿಸ್ ಮಾಡಿಕೊಳ್ತಿದ್ದಾರೆ. ಈಗಾಗಲೇ ಶೇ 50 ರಷ್ಟು ಸೀಟ್ ಬರ್ತಿ ಮಾಡಿ ಸಿನಿಮಾ ಪ್ರದರ್ಶನಕ್ಕೆ ಥಿಯೇಟರ್ಗಳಿಗೆ ಅನುಮತಿ ನೀಡಿದ್ರು, ಅಂದುಕೊಂಡ ಮಟ್ಟಕ್ಕೆ ಸಿನಿಮಾಗಳೂ ರಿಲೀಸ್ ಆಗ್ತಾ ಇಲ್ಲ ಇನ್ನು ಸಿನಿಮಾ ಮಂದಿರ ಕಡೆಗೆ ಸಿನಿರಸಿಕರು ಹೆಜ್ಜೆ ಹಾಕುತ್ತಿಲ್ಲ, ಹೀಗಿರಬೇಕಾದ್ರೆ ಸ್ಯಾಂಡಲ್ವುಡ್ ಸ್ಟಾರ್ಗಳ ಸಿನಿಮಾಗೂ ಈ ಬಿಸಿ ತಟ್ಟಿದ್ದು, ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಿರಬೇಕಾದ್ರೆ ಇದೀಗ ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾದ ರಿಲೀಸ್ ಡೇಟ್ ಗೊತ್ತಾಗಿದ್ದು, ಜನವರಿ 22ಕ್ಕೆ ಚಿತ್ರ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿ ಓಡಾಡುತ್ತಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗಲಿರೋ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಇದೀಗ ಜನವರಿ 22ಕ್ಕೆ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಆದ್ರೆ ರಿಲೀಸ್ ಡೇಟ್ ಬಗ್ಗೆ ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳೋದೆ ಬೇರೆ. ನಾವು ಜನವರಿ 22ಕ್ಕೆ ಚಿತ್ರ ಬಿಡುಗಡೆ ಮಾಡಲು ಅಂದುಕೊಂಡಿದ್ದೇವೆ, ಆದ್ರೆ ಈ ದಿನಾಂಕದ ಹೊತ್ತಿಗೆ ತೆಲುಗಿನಲ್ಲಿ ಡಬ್ಬಿಂಗ್ ಕೆಲಸ ಮುಗಿಯಬೇಕು, ಜೊತೆಗೆ ಕನ್ನಡದಲ್ಲಿ ಒಂದಿಷ್ಟು ಸಣ್ಣ ಪುಟ್ಟ ಕೆಲಸಗಳು ಮುಗಿಯಬೇಕಾಗಿದೆ.
ಸಿನಿಮಾದ ಕೆಲಸಗಳನ್ನು ಜನವರಿ 22ರ ಒಳಗೆ ಮುಗಿಸಬೇಕಿದೆ. ಅಷ್ಟರಲ್ಲಿ ಥಿಯೇಟರ್ನಲ್ಲಿ ಶೇ 50ರಷ್ಟಿರೋ ಸೀಟು ಭರ್ತಿ ನಿಯಮ ಬದಲಾಗಿ ಶೇ 100 ಅಥವಾ ಶೇ 75 ರಷ್ಟು ಭಾಗ ಭರ್ತಿಗೆ ಅನುಮತಿ ಸಿಗಬೇಕು , ಇವೆಲ್ಲವೂ ಜನವರಿ 22ರ ಹೊತ್ತಿಗೆ ಆಗಿದ್ದರೆ ಖಂಡಿತ ನಾವು ಯುವರತ್ನ ಸಿನಿಮಾವನ್ನು ಜನವರಿ 22ಕ್ಕೆ ರಿಲೀಸ್ ಮಾಡಲಿದ್ದೇವೆ. ಒಂದು ವೇಳೆ ಈ ದಿನಾಂಕದಂದು ಬೇರೆಯವರು ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದ್ದರೆ ಅವರ ಜೊತೆ ಮಾತುಕತೆ ಮಾಡಿಕೊಂಡು ಯಾರಿಗೂ ಯಾರು ಕಾಂಪಿಟೇಶನ್ ಮಾಡಿಕೊಳ್ಳದೇ ಥಿಯೇಟರ್ಗೆ ಬರುತ್ತೇವೆ ಅಂತ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ರಾಮ್ ಹೇಳಿದ್ದಾರೆ.