ಅಪ್ಪನ ಹಾದಿಯಲ್ಲಿ ಸಾಗುತ್ತಿರೋ ಪುನೀತ್‌ ರಾಜ್‌ಕುಮಾರ್‌..!

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಏನೇ ಮಾಡಿದ್ರು ಅದ್ರಲ್ಲಿ ಒಂದು ಸಂದೇಶ ಇರಬೇಕು. ಮಾಡಿದ ಕೆಲಸ ಬೇರೆಯವರಿಗೆ ಉಪಕಾರವಾಗಿರಬೇಕು ಅನ್ನೋ ಗುಣವನ್ನು ಇಟ್ಟುಕೊಂಡಿರುವ ನಟ. ಅಪ್ಪು ಸಿನಿಮಾದ ಜೊತೆಯಲ್ಲಿಯೇ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವ್ಯಕ್ತಿ. ಸದ್ಯ ಅಪ್ಪು ಅವರ ಈ ಒಂದು ಕೆಲಸಕ್ಕೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಈಗ ಬಿಎಂಟಿಸಿಗೆ ನೂತನ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದು.

ನೂತನ ಬಸ್‌ ಲೇನ್‌ ಬಗ್ಗೆ ಜಾಗೃತಿ ಮೂಡಿಸಲು ಪುನೀತ್‌ ರಾಜ್‌ಕುಮಾರ್‌ ಅವರನ್ನು ಬಿಎಂಟಿಸಿ ಕೆಳಿಕೊಂಡಿದ್ದರು. ಆದ್ರೆ ಪುನೀತ್‌ ರಾಜ್‌ಕುಮಾರ್‌ ಈ ಒಂದು ಜಾಗೃತಿ ಕಾರ್ಯಕ್ರಮಕ್ಕೆ ಒಂದು ರೂಪಾಯಿ ಹಣವನ್ನು ತೆಗೆದುಕೊಳ್ಳದೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಲು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದು. ಈ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ನಂದಿನಿ ಹಾಲಿನ ಉತ್ಪಾದನೆಗೂ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾಗಲೂ ಸಹ ಒಂದು ರೂಪಾಯಿ ಹಣವನ್ನು ಪಡೆಯದೆ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲದೇ ಈ ಹಿಂದೆ ನಮ್ಮ ತಂದೆಯವರು ಸಹ ನಂದಿನಿ ಹಾಲಿನ ಉತ್ಪಾದನೆಯ ಪ್ರಮೋಷನ್‌ಗೂ ಸಹ ಯಾವುದೇ ಹಣವನ್ನು ಪಡೆದಯದೇ ಇದ್ದದ್ದು ನಮ್ಮ ಈ ಕಾರ್ಯಕ್ಕೆ ಸ್ಪೂರ್ತಿ ಎಂದು ಸಹ ಹೇಳಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top