ಅಪ್ಪನ ಅಂಗಡಿಯಿಂದಲೇ 14 ಕೆಜಿ ಚಿನ್ನ ಕದ್ದ ಮಗ..

ಅಪ್ಪನ ಚಿನ್ನದ ಅಂಗಡಿಯಲ್ಲಿ 14ಕೆಜಿ ಚಿನ್ನವನ್ನು ಮಗನೇ ಕದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಹರ್ಷ ಬೋತ್ರ ಎಂಬ ೨೪ವರ್ಷದ ಯುವಕ ಆರೋಪಿಯಾಗಿದ್ದು, ಸುಭಾಷ್‌ ಚಂದ್ರ ಬೋತ್ರಾ ಎಂಬ ಚಿನ್ನದ ವ್ಯಾಪಾರಿಯ ಮಗನಾಗಿದ್ದಾನೆ. ಹರ್ಷ ಆನ್‌ಲೈನ್‌ ವ್ಯವಹಾರದಲ್ಲಿ ೧.೫ಕೋಟಿ ನಷ್ಟವನ್ನು ಅನುಭವಿಸಿದ್ದು ಇದನ್ನು ಸರಿದೂಗಿಸಲು ಈ ರೀತಿ ಕೆಲಸವನ್ನು ಮಾಡಿದ್ದಾನೆ.

ಕಳ್ಳತನವಾದ ಪೊಲೀಸರು ಬೇರೆಯವರ ಮೇಲೆ ಅನುಮಾನದಿಂದ ತನಿಖೆ ನಡೆಸುತ್ತಿದ್ದರು, ಆದ್ರೆ ಪಕ್ಕದ ಅಂಗಡಿಯ ಸಿಸಿಟಿವಿಯನ್ನು ಪರಿಶೀಲಿಸುವ ವೇಳೆ ಹರ್ಷ ಬ್ಯಾಗ್‌ ಹಿಡಿದುಕೊಂಡು ಅಂಗಡಿಯ ಸುತ್ತಮುತ್ತ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ,ಇದರಿಂದ ಅನುಮಾನಗೊಂಡ ಪೊಲೀಸರು ಹರ್ಷನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ ಆದ ನಷ್ಟವನ್ನು ಸರಿದೂಗಿಸುವ ಸಲುವಾಗಿ ಈ ರೀತಿ ಮಾಡಿದ್ದೇನೆ. ಎಲ್ಲಾ ಸರಿಹೋದ ಮೇಲೆ ಚಿನ್ನವನ್ನು ಹಿಂದಿರುಗಿಸು ಪ್ಲಾನ್‌ ಮಾಡಿದ್ದೇ ಎಂದು ಹರ್ಷ ವಿಚಾರಣೆ ವೇಳೆ ಹೇಳಿದ್ದಾನೆ. ಇನ್ನು ಈತನ ಅಪ್ಪ ೨೦ ವರ್ಷಗಳಿಂದ ಚಿನ್ನದ ಅಂಗಡಿ ನಡೆಸುತ್ತಿದ್ದರು. ಸದ್ಯ ಹರ್ಷ ಬೋತ್ರ ಪೊಲೀಸರ ವಶದಲ್ಲಿ ಇದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top