ಅಪಘಾತದಲ್ಲಿ ಸತ್ತ ಭಿಕ್ಷುಕನ ಹಣ ಎಣಿಸಲು ಪೊಲೀಸರಿಗೆ ಬೇಕಾಯ್ತು ಬರೋಬ್ಬರಿ 8ಗಂಟೆಗಳು..!

ನಾವು ನೀವೂ ರಸ್ತೆಯಲ್ಲಿ ಓಡಾಡುವಾಗ, ರೈಲಿನಲ್ಲಿ ಚಲಿಸುವಾಗ ಎಷ್ಟೋ ಭಿಕ್ಷುಕರನ್ನು ನೋಡಿರ್ತಿವಿ, ಇನ್ನು ಆ ಭಿಕ್ಷುಕರಿಗೆ ಒಂದೊ ಎರಡೋ ರೂಪಾಯಿಯನ್ನು ನೀಡುತ್ತೇವೆ, ಅಷ್ಟೇ ಅಲ್ಲ ಆ ಭಿಕ್ಷುಕನ ಬಳಿ ಹಣ ಎಲ್ಲಿ ಇರುತ್ತದೆ ಅನ್ನೋ ಮಾತನ್ನು ಮನಸ್ಸಿನಲ್ಲೇ ಅಂದು ಕೊಂಡು ದಾನ ಮಾಡಿರುತ್ತೇವೆ, ಆದ್ರೆ ಇಲ್ಲೋಬ್ಬ ಭಿಕ್ಷುಕನ್ನು ನೋಡಿದ್ರೆ ನೀವೂ ಶಾಕ್‌ ಆಗ್ತೀರಾ, ಈತ ಇತ್ತಿಚೆಗೆ ರೈಲಿಗೆ ಸಿಲುಕಿ ಸತ್ತಿದ್ದು, ಆತ ಬಿಟ್ಟು ಹೋಗಿದ್ದು ಮಾತ್ರ ಲಕ್ಷ ಲಕ್ಷ ದುಡ್ಡು, ನೀವೂ ಆಶ್ಚರ್ಯ ಪಡಬಹದು ಭಿಕ್ಷೆ ಬೇಡುವ ವ್ಯಕ್ತಿಯ ಬಳಿ ಹೇಗೆ ಲಕ್ಷ ಲಕ್ಷ ಹಣ ಎಂದು ಆದ್ರೆ ಇದು ನಿಜ ಕೂಡ ಹೌದು.

83 ವರ್ಷದ ಬೀರ್ಜು ಚಂದ್ರ ಆಜಾದ್‌ ಎಂಬ ರಾಜಸ್ಥಾನ ಮೂಲದ ವ್ಯಕ್ತಿ ಮುಂಬೈ ರೈಲು ಹಳಿ ದಾಟುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಈತ ಮುಂಬೈ ರೈಲು ನಿಲ್ದಾಣದ ಪಕ್ಕದಲ್ಲೇ ಸಣ್ಣ ಗುಡಿಸಿಲಿನಲ್ಲಿ ವಾಸವಾಗಿದ್ದು, ಅದೇ ರೈಲು ನಿಲ್ದಾಣದಲ್ಲಿ ಪ್ರತಿ ದಿನ ಭಿಕ್ಷಾಟನೆ ಮಾಡುತ್ತಿದ್ದ. ಇನ್ನು ಈತ ರೈಲು ಹಳಿ ದಾಟುವ ವೇಳೆ ಮೃತ ಪಟ್ಟಿದ್ದಾನೆ. ಈ ವಿಚಾರವಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಲು ಗುಡಿಸಲಿಗೆ ಹೋಗಿದ್ದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು, ಮನೆಯಲ್ಲಿ ಯಾರು ಇಲ್ಲದ ಕಾರಣ ಮನೆಯನ್ನು ಪರಿಶೀಲಿಸಲು ಮುಂದಾದ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದಾಗ ಒಂದು ಹಳೆಯ ಪಾತ್ರೆಯಲ್ಲಿ ನಾಣ್ಯಗಳು ದೊರೆತ್ತಿದ್ದು ಅದನ್ನು ಪೊಲೀಸರು ಎಣಿಸಲು ಮುಂದಾಗಿದ್ದಾರೆ, ಇನ್ನು ಎಣಿಕೆ ಮಾಡಲು ಬರೋಬ್ಬರಿ 8 ಗಂಟೆಗಳು ಹಿಡಿದ್ದಿದ್ದು ಆ ಹಳೇಯ ಪಾತ್ರೆಯಲ್ಲಿ 1 ಲಕ್ಷದ 77 ಸಾವಿರ ರೂಪಾಯಿ ನಾಣ್ಯಗಳು ದೊರೆತಿದೆ, ಇದರ ಜೊತೆಯಲ್ಲಿ ಕೆಲವು ಎಫ್‌ಡಿ ದಾಖಲೆಗಳು ಸಹ ದೊರೆತಿದೆ ಅವು 8 ಲಕ್ಷದ 77 ಸಾವಿರ ಮೊತ್ತದ ದಾಖಲೆಗಳಾಗಿವೆ. ಅಷ್ಟೇ ಅಲ್ಲದೇ ಬೀರ್ಜು ಚಂದ್ರ ಆಜಾದ್‌ ಅವರ ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಕೂಡ ಮನೆಯಲ್ಲಿ ಸಿಕ್ಕಿವೆ.

ಪೊಲೀಸರಿಗೆ ಇವರ ಮನೆಯಲ್ಲಿ ಆತನೊಬ್ಬನೆ ಇರುವ ಮಾಹಿತಿ ಸಿಕ್ಕಿದ್ದು ಆತನ ಕುಟುಂಬಸ್ಥರು ರಾಜಸ್ಥಾನದಲ್ಲಿ ವಾಸವಿರಬಹುದು ಅನ್ನೋ ಮಾಹಿತಿಯನ್ನು ಕಲೆಹಾಕಲು ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top