ಅನಿಲ್‌ ಕುಂಬ್ಳೆಗೆ ನೀವೂ ನಮ್ಮ ಹೆಮ್ಮೆ ಎಂದ ಕಿಚ್ಚ ಸುದೀಪ್‌

ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್‌ ಜಗತ್ತು ಕಂಡ ಅದ್ಭುತ ಸ್ಪಿನ್‌ ಮಾಂತ್ರಿಕ ಜಂಬೋ ಅನಿಲ್‌ ಕುಂಬ್ಳೆ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1990ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅನಿಲ್‌ ಕುಂಬ್ಳೆ 18 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ರು, ಟೆಸ್ಟ್‌ ಮ್ಯಾಚ್‌ ಒಂದರಲ್ಲಿ ಪಾಕ್‌ ವಿರುದ್ಧ 10 ವಿಕೆಟ್‌ ಕೀಳುವ ಮೂಲಕ ದಾಖಲೆ ಬರೆದಿದ್ದ ಹೆಮ್ಮೆಯ ಕನ್ನಡಿಗ ಇಂದು 50ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅನೇಕ ಗಣ್ಯರು ಅನಿಲ್‌ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದು, ಸದ್ಯ ಐಪಿಎಲ್‌ ನಲ್ಲಿ ಪಂಜಾಬ್‌ ತಂಡದ ಹೆಡ್‌ ಕೋಚ್‌ ಆಗಿ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸಿದ್ದು, ಈ ವೇಳೆ ಕನ್ನಡಿಗೆ ಅನಿಲ್‌ ಕುಂಬ್ಳೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೂಡ ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ. ʻನೀವು ಫೀಲ್ಡ್‌ನಲ್ಲಿ ಹೀರೋ ಆಗಿದ್ದರಿಂದ ನಿಮ್ಮನ್ನು ಇಂದು ಅದು ಲೆಜೆಂಡ್‌ ಆಗಿ ಮಾಡಿದೆ ಅನಿಲ್‌ ಸರ್‌. ನೀವು ಎಲ್ಲ ಪರಿಸ್ಥಿತಿಳನ್ನು ನಿಭಾಯಿಸಿದ ರೀತಿ ನಿಮ್ಮನ್ನು ಗುರುತಿಸುವಂತೆ ಮಾಡಿದೆ. ನಿಮ್ಮ ಮಾತುಗಳು ನೀವು ಓರ್ವ ಜೆಂಟಲ್‌ಮ್ಯಾನ್‌ ಅನ್ನೋದನ್ನ ತೋರಿಸಿಕೊಟ್ಟಿವೆ. ಅದೇ ನಮಗೆ ಸ್ಫೂರ್ತಿ. ನೀವು ಎಂದಿಗೂ ನಮ್ಮ ಹೆಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಸರ್‌ ಎಂದು ಟ್ವೀಟ್‌ ಮಾಡುವ ಮೂಲಕ ಕಿಚ್ಚ ಸುದೀಪ್‌ ವಿಶ್‌ ಮಾಡಿದ್ದಾರೆ.

ಟೀಂ ಇಂಡಿಯಾದಲ್ಲಿ ಜಂಬೋ ಎಂದೇ ಖ್ಯಾತಿ ಪಡೆದಿದ್ದ ಅನಿಲ್‌ ಕುಂಬ್ಳೆ 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ರು, 132 ಟೆಸ್ಟ್‌ ಮ್ಯಾಚ್‌ನಲ್ಲಿ 619 ವಿಕೆಟ್‌ ಕಬಳಿಸಿದ್ರೆ. 217 ಏಕದಿನ ಪಂದ್ಯಗಳನ್ನು ಆಡಿ 337 ವಿಕೆಟ್‌ಗಳನ್ನು ಕಿತ್ತು ದಾಖಲೆ ನಿರ್ಮಿಸಿದ್ರು. ಟೀಂ ಇಂಡಿಯಾದ ಹೆಡ್‌ ಕೋಚ್‌ ಆಗಿಯೂ ಕಾರ್ಯ ನಿರ್ಹಿಸಿದ್ದ ಕುಂಬ್ಳೆ ಸದ್ಯ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಕೋಚ್‌ ಆಗಿದ್ದು ನಿವೃತ್ತಿ ನಂತರವು ಕ್ರಿಕೆಟ್‌ ಜೀವನದಲ್ಲಿ ಸಕ್ರಿಯರಾಗಿದ್ದಾರೆ/ 50ನೇ ವಸಂತಕ್ಕೆ ಕಾಲಿಟ್ಟಿರೋ ನಮ್ಮ ಹೆಮ್ಮೆಯ ಕನ್ನಡಿಗ ಅನಿಲ್‌ ಕುಂಬ್ಳೆ ಅವರಿಗೆ ನಮ್ಮ ಕಡೆಯಿಂದಾನೂ ವಿಶ್‌ ಹೇಳೋಣ ಹ್ಯಾಪಿ ಬರ್ತ್‌ಡೇ ಅನಿಲ್‌ ಕುಂಬ್ಳೆ ಸಾರ್‌.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top