ಅತ್ಯಾಚಾರ ವೆಸಗಿದ ಕ್ರೂರಿಗಳಿಗೆ ಜೈಲಿನಲ್ಲಿ ಮಟನ್ ಊಟ..ಹೈ ಸೆಕ್ಯೂರಿಟಿ..!

ಹೈದರಾಬಾದ್ ಪಶುವೈದ್ಯೆಯನ್ನು ಅಮಾನುಶವಾಗಿ ಅತ್ಯಾಚಾರ ಮಾಡಿ ಕೊಲೆಗೈದ ನಾಲ್ಕು ಆರೋಪಿಗಳಿಗೆ ಸದ್ಯ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು ,ಇತ್ತ ಅತ್ಯಾಚಾರಿ ಆರೋಪಿಗಳಿಗೆ ಜೈಲಿನಲ್ಲಿ ಹೈ ಸೆಕ್ಯುರಿಟಿ ನೀಡುವ ಜೊತೆಯಲ್ಲಿ ಮಟನ್ ಊಟವನ್ನು ಒದಗಿಸಲಾಗಿದೆ ಅನ್ನೋ‌ ಮಾಹಿತಿ ಈಗ ಹೊರಬಿದ್ದಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ರೀತಿ ಹೀನ ಕೃತ್ಯ ಎಸಗಿದವರಿಗೆ ಗಲ್ಲಿಗೆ ಏರಿಸುವ ಬದಲು ಸತ್ಕರಿಸುತ್ತಿರುವುದು ಎಷ್ಟು ಸರಿ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹೈದರಾಬಾದ್ ಪಶುವೈದ್ಯೆ ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಡೀ ದೇಶ ಮಮ್ಮಲ ಮರುಗಿದೆ. ಕೃತ್ಯವೆಸೆಗಿದ ನಾಲ್ವರು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿನಲ್ಲಿರಿಸಲಾಗಿದೆ. ಒಂದೆಡೆ ಈ ದುಷ್ಟರನ್ನು ನಮಗೆ ಒಪ್ಪಿಸಿ ನಾವೇ ಶಿಕ್ಷೆ ವಿಧಿಸುತ್ತೇವೆ ಎಂದು ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಆದರೆ ಜೈಲಿನ ಕೈಪಿಡಿ ಪ್ರಕಾರ, ಭಾನುವಾರ ಕೈದಿಗಳಿಗೆ ಬಾಡೂಟ ನೀಡಲಾಗುತ್ತದೆ. ಆ ನಿಯಮದಂತೆ ಜೈಲಿನ ಒಳಗಿರುವ ಆರೋಪಿಗಳಿಗೂ ಮಟನ್ ಊಟ ನೀಡಲಾಗಿದ್ದು, ಬಿಗಿಭದ್ರತೆ ಒದಗಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top