ಅಜ್ಜಿಯರ ಕ್ಯಾಟ್ ವಾಕ್‌ಗೆ ನಾಚಿತು ಮಾಡೆಲಿಂಗ್‌ ಲೋಕ..!

ಮಾಡೆಲಿಂಗ್‌ ಲೋಕ ಎಂದ್ರೆ ಅಲ್ಲಿ ಗ್ಲಾಮರ್‌ಗೆ ಹೆಚ್ಚು ಆದ್ಯತೆ ಅನ್ನೋ ಮಾತಿದೆ..ಇನ್ನು ಕ್ಯಾಟ್‌ವಾಕ್‌ ಮಾಡ್ತಾರೆ ಅಂದ್ರೆ ಕೇವಲ ಯುವಕ ಯುವತಿಯರಿಗೆ ಸೀಮಿತ ಅನ್ನೋ ಮಾತು ಕೂಡ ಇದೆ. ಸೌಂದರ್ಯ ಸ್ಪರ್ಧೆ ಅಂದ್ರೆ ಅಲ್ಲಿ ಯುವತಿಯರು ಮಾತ್ರ ಇರ್ತಾರೆ. ಆದ್ರೆ ಮಂಡ್ಯದ ಜನ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸೌಂದರ್ಯಕ್ಕೆ ಯಾವುದೇ ವಯಸ್ಸಿನ ಗಡಿ ಇಲ್ಲ ಅನ್ನೋದನ್ನ ಮಂಡ್ಯದ ಜನ ತೋರಿಸಿಕೊಟ್ಟಿದ್ದಾರೆ. ಹೌದು ಮಂಡ್ಯದಲ್ಲಿ ಚಿಗುರು ಮಹಿಳಾ ಮಂಡಳಿ ವತಿಯಿಂದ ನಡೆದ ಅಜ್ಜಿಯರಿಗಾಗಿ ನಡೆದ ಸೌಂದರ್ಯ ಸ್ಪರ್ಧೇ ನೋಡುಗರರನ್ನು ಸೆಳೆಯುವ ಜೊತೆಯಲ್ಲಿ ಮನೋರಂಜನೆಯನ್ನು ನೀಡಿದೆ.


ಈ ಸ್ಪರ್ಧೆಯಲ್ಲಿ 125 ಮಂದಿ ಅಜ್ಜಿಯರು ಭಾಗವಹಿಸಿದ್ದು. ಎಲ್ಲರೂ ಭಾರತೀಯ ಉಡುಗೆ ತೊಟ್ಟು ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಎಲ್ಲಾ ಅಜ್ಜಿಯರು ವಿಭಿನ್ನ ರೀತಿಯ ಉಡುಗೆಗಳನ್ನು ತೊಟ್ಟು ಕ್ಯಾಟ್‌ ವಾಕ್‌ ಮಾಡಿ ನಾವು ಯಾವ ಯುವತಿಯರಿಗೂ ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top