ಅಕ್ಟೋಬರ್ ನಿಂದ ಅಖಾಡಕ್ಕೆ ಡಿ ಬಾಸ್ ಎಂಟ್ರಿ..

ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಕೊರೋನಾ ಎಫೆಕ್ಟ್‍ನಿಂದಾಗಿ ಶೂಟಿಂಗ್‍ನಿಂದ ಕೊಂಚ ವಿರಾಮ ತೆಗೆದುಕೊಂಡು ರೆಸ್ಟ್ ಮೂಡ್‍ನಲ್ಲಿ ಇದ್ದಾರೆ. ಸತತ ಮೂರು ತಿಂಗಳಿನಿಂದ ಶೂಟಿಂಗ್‍ನಿಂದ ದೂರ ಇದ್ದ ಡಿ ಬಾಸ್, ಸ್ನೇಹಿತರ ಜೊತೆ ಸೇರಿ ತಮ್ಮ ಫಾರ್ಮ ಹೌಸ್‍ನಲ್ಲಿ ಕಾಲ ಕಳೆಯುವ ಜೊತೆಯಲ್ಲಿ, ತಮ್ಮ ಸ್ನೇಹಿತರ ಮನೆಗಳಿಗೆ ಹೋಗಿ ಕೆಲಹೊತ್ತು ಕಾಲ ಕಳೆಯುತ್ತಿದ್ದರು, ಇನ್ನು ಆಗಾಗೇ ಕಾಡುಗಳನ್ನು ಸಹ ಸುತ್ತಿ ಬಂದಿದ್ದಾರೆ. ಈಗಾಗಲೇ ಫುಲ್ ರೆಸ್ಟ್ ಮಾಡಿರೋ ಡಿ ಬಾಸ್ ಇದೀಗ ಅಖಾಡಕ್ಕೆ ಇಳಿಯೋದಕ್ಕೆ ರೆಡಿಯಾಗಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ದರ್ಶನ್ ಮುಂದಿನ ಚಿತ್ರ ಅಂದ್ರೆ ಅದು `ರಾಜ ವೀರ ಮದಕರಿ ‘ ಸಿನಿಮಾ ಈಗಾಗಲೇ ಲಾಕ್‍ಡೌನ್‍ಗೂ ಮುಂಚೆ ಒಂದು ಹಂತ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಇದೀಗ ಅಕ್ಟೋಬರ್‍ನಲ್ಲಿ ಮತ್ತೆ ಶೂಟಿಂಗ್ ಶುರುಮಾಡಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ದರ್ಶನ್ ಕೂಡ ಅಕ್ಟೋಬರ್‍ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಇನ್ನು ರಾಜವೀರ ಮದಕರಿ ಚಿತ್ರದ ಶೂಟಿಂಗ್ ಅಕ್ಟೋಬರ್ ಮೊದಲ ವಾರದಲ್ಲಿ ಶುರುವಾಗಲಿದ್ದು, ಆ ಮೂಲಕ ಡಿ ಬಾಸ್ ಮತ್ತೆ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top