ಅಕ್ಟೋಬರ್‌ 30ಕ್ಕೆ ಕಾಜಲ್‌ ಅಗರ್‌ವಾಲ್‌ ಮದುವೆ..

ಸೌತ್‌ ಇಂಡಿಯನ್‌ ಬ್ಯೂಟಿ ಕಾಜಲ್‌ ಅಗರ್‌ವಾಲ್‌ ಉದ್ಯಮಿ ಗೌತಮ್‌ ಎಂಬುವವರನ್ನು ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇತ್ತು, ಆದ್ರೀಗ ಕಾಜಲ್‌ ಅಧಿಕೃತವಾಗಿ ಈ ಮಾಹಿತಿಯನ್ನು ಹೊರಹಾಕಿದ್ದಾರೆ. ಅಕ್ಟೋಬರ್‌ 30ರಂದು ಮುಂಬೈನಲ್ಲಿ ಗೌತಮ್‌ ಕಿಟ್ಜು ಅವರನ್ನು ವಿವಾಹವಾಗುವುದರ ಬಗ್ಗೆ ತಮ್ಮ ಇಸ್ಟ್ಸಾಗ್ರಾಮ್‌ನಲ್ಲಿ ಬರೆದುಕೊಳ್ಳುವ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ.

https://www.instagram.com/kajalaggarwalofficial/?utm_source=ig_embed

ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನಾನು ಆಕ್ಟೋಬರ್‌ 30ರಂದು ಮುಂಬೈನಲ್ಲಿ ಮದುವೆಯಾಗುತ್ತಿದ್ದೇನೆ,ಮನೆಯವರು ಮತ್ತು ಕೆಲವು ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ.ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ, ನಾನು ಥ್ರಿಲ್‌ ಆಗಿದ್ದೇನೆ.ನೀವು ಇಷ್ಟು ದಿನ ತೋರಿದ ಪ್ರೀತಿಗೆ ನಾನು ಚಿರಋಣಿ, ನಿಮ್ಮಲ್ಲರ ಆಶೀರ್ವಾದ ನನಗೆ ಇರಲಿ, ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸಿ ನಿಮಗೆ ಮನೋರಂಜನೆ ನೀಡುತ್ತೇನೆ, ನಿಮ್ಮ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕಾಜಲ್‌ ವಿವಾಹವಾಗುತ್ತಿರೋ ಗೌತಮ್‌ ಡಿಸರ್ನ್‌ ಲಿವಿಂಗ್‌ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top