ಅಂಪೈರ್‌ಗೆ ಮ್ಯಾನ್‌ಆಫ್‌ದಿ ಮ್ಯಾಚ್‌ ಕೊಡಿ ಎಂದ ಸೆಹ್ವಾಗ್‌

ನಿನ್ನೆ ಡೆಲ್ಲಿ ಮತ್ತು ಪಂಜಾಬ್‌ ನಡುವೆ ನಡೆದ ರೋಚಕ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಪಂಜಾಬ್‌ ಸೋಲನ್ನು ಕಂಡಿತ್ತು, ಆದ್ರೆ ಇದೀಗ ಮ್ಯಾಚ್‌ ರೆಫರಿ ವಿರುದ್ಧ ಈಗ ಎಲ್ಲಾ ಕಡೆ ಅಪಸ್ವರ ಕೇಳಿ ಬರ್ತಾ ಇದೆ.

ನಿನ್ನೆ ನಡೆದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ ತಂಡ 18ನೇ ಓವರ್‌ ವೇಳೆ ಮಯಾಂಕ್‌ ಅಗರ್‌ವಾಲ್‌ ಮತ್ತು ಜೋರ್ಡಾನ್‌ ಎರಡು ರನ್‌ ಕದಿಯುವ ವೇಳೆ ಅಂಪೈರ್‌ ಯಡವಟ್ಟಿನಿಂದ ಒಂದು ರನ್‌ ಶಾರ್ಟ್‌ ನೀಡಲಾಗಿತ್ತು, ಜೋರ್ಡನ್‌ ನಾನ್‌ ಸ್ಟೈಕ್‌ನಿಂದ ಸ್ಟ್ರೈಕ್‌ ಕ್ರೀಸ್‌ ಮುಟ್ಟಿ ಎರಡನೇ ರನ್‌ ಓಡುವ ವೇಳೆ ಲೆಗ್‌ ಅಂಪೈರ್‌ ಒಂದು ರನ್‌ ಶಾರ್ಟ್‌ ಮಾಡಿದ್ದರು, ಜೋರ್ಡಾನ್‌ ಕ್ರೀಸ್‌ ಮುಟ್ಟಿಲ್ಲ ಅನ್ನೋ ಕಾರಣಕ್ಕೆ ಒಂದು ರನ್‌ ಶಾರ್ಟ್‌ ಮಾಡಿದ್ರು, ಆದ್ರೀಗ ಈ ಫೋಟೊ ವೈರಲ್‌ ಆಗಿದ್ದು, ಇದರಲ್ಲಿ ಜೋರ್ಡಾನ್‌ ಕ್ರೀಸ್‌ ಮುಟ್ಟಿದ್ದರು ಅಂಪೈರ್‌ ಒಂದು ರನ್‌ ಶಾರ್ಟ್‌ ಮಾಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಅಂಪೈರ್‌ ಕ್ರೀಸ್‌ಗಿಂತ ತುಂಬಾ ದೂರ ನಿಂತು ಈ ರೀತಿ ತೀರ್ಪು ನೀಡಿರೋದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದೀಗ ವಿರೇಂದ್ರ ಸೆಹ್ವಾಗ್‌ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ತಮ್ಮ ಟ್ವೀಟರ್‌ನಲ್ಲಿ ʻಇದನ್ನು ಶಾರ್ಟ್‌ ರನ್‌ ಎಂದು ಪರಿಗಣಿಸಿದ ಅಂಪೈರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top