ಅಂಪೈರ್‌ಗಳ ಯಡವಟ್ಟು ಬಗ್ಗೆ ಹೊಸ ನಿಯಮಕ್ಕೆ ಬೇಡಿಕೆ ಇಡ್ತಾರಂತೆ ಕೊಹ್ಲಿ,ಕೆಎಲ್‌ ರಾಹುಲ್‌

ಕ್ರಿಕೆಟ್‌ನಲ್ಲಿ ಒಂದು ಮ್ಯಾಚ್‌ ಗೆಲುವು ಸೋಲು ಕೆಲವೊಮ್ಮ ಆಟಗಾರರ ಜೊತೆಯಲ್ಲಿ ಅಂಪೈರ್‌ಗಳ ಕೆಟ್ಟ ತೀರ್ಪಿನಿಂದಲೂ ನಿರ್ಧಾರವಾಗಿ ಹೋಗಿ ಬಿಡುತ್ತದೆ.ಅದಕ್ಕೆ ಅದೆಷ್ಟೋ ಮ್ಯಾಚ್‌ಗಳು ಅಂಪೈರ್‌ನ ಒಂದು ಕೆಟ್ಟು ತೀರ್ಪಿನಿಂದ ಸೋಲನ್ನು ಕಂಡಿವೆ ಪ್ರತಿ ತಂಡಗಳು, ಇನ್ನು ಸದ್ಯ ಐಪಿಎಲ್‌ ವಿಚಾರದಲ್ಲೂ ಅಂಪೈರ್‌ಗಳ ಕೆಲವೊಂದಿಷ್ಟು ಕೆಟ್ಟ ತೀರ್ಪುಗಳಿಗೂ ಸಾಕಷ್ಟು ನಿದರ್ಶನಗಳಿವೆ. ಈ ಬಾರಿಯ ಐಪಿಎಲ್‌ನಲ್ಲೂ ಇಂತಹ ಘಟನೆಗಳನ್ನು ನೋಡಿದ್ದೇವೆ.

ವೈಡ್‌ ಇಲ್ಲದೇ ಇರೋ ಬಾಲ್‌ ವೈಡ್‌ ಎಂದು ಹೇಳಿರೋದು, ನೋ ಬಾಲ್‌ ವಿಚಾರವಾಗಿ ಹೀಗೆ ಕೆಲವೊಂದಿಷ್ಟು ಕೆಟ್ಟ ತೀರ್ಪುಗಳು ಈ ಬಾರಿಯ ಐಪಿಎಲ್‌ನಲ್ಲಿ ಕ್ರಿಕೆಟ್‌ ಪ್ರಿಯರು ನೋಡಿದ್ದು ಇದರ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.

ಇದೀಗ ಈ ವಿಚಾರವಾಗಿ ವಿರಾಟ್‌ ಕೊಹ್ಲಿ ಮತ್ತು ಕೆಎಲ್‌ ರಾಹುಲ್‌ ಮಾತನಾಡಿದ್ದಾರೆ. ಕೆಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಪೂಮಾ ಇಂಡಿಯಾಗಾಗಿ ಇನ್ಸ್ಟ್ರಾಗ್ರಾಮ್‌ ಮೂಲಕ ಮಾಡಿದ ಲೈವ್‌ನಲ್ಲಿ ಅಭಿಮಾನಿಯೊಬ್ಬರು ವಿರಾಟ್‌ ಮತ್ತು ರಾಹುಲ್‌ಗೆ ಪ್ರಶ್ನೆ ಹಾಕಿದ್ದು, ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ನಿಮಗೆ ಅನುಕೂಲ ಆಗುವಂತೆ ಒಂದು ರೂಲ್ಸ್‌ ತಿದ್ದು ಪಡಿ ಮಾಡಲು ಬಯಸಿದ್ರೆ ಯಾವ ರೂಲ್ಸ್‌ ಚೇಂಚ್‌ ಮಾಡ್ತೀರಾ ಅಂತ ಅಭಿಮಾನಿ ಪ್ರಶ್ನೆ ಹಾಕಿದ್ದು

https://www.instagram.com/tv/CGVGHbInwNd/?utm_source=ig_web_copy_link

ಇದಕ್ಕೆ ಇಬ್ಬರು ಸಖತ್‌ ಆಗಿರೋ ಉತ್ತರವನ್ನು ನೀಡಿದ್ದಾರೆ. ಮೊದಲು ಕೆ.ಎಲ್‌ ರಾಹುಲ್‌ ಪ್ರಶ್ನೆಗೆ ಉತ್ತರ ನೀಡಿದ್ದು, ನೂರು ಮೀಟರ್‌ಗಿಂತ ದೂರ ಯಾರು ಸಿಕ್ಸ್‌ ಬಾರಿಸುತ್ತಾರೋ ಅವರಿಗೆ ಸಿಕ್ಸ್‌ ಜೊತೆಯಲ್ಲಿ ಎಕ್ಸ್ಟ್ರಾ ರನ್‌ ನೀಡುವಂತೆ ಕೇಳುತ್ತೇನೆ ಎಂದು ಹೇಳಿದ್ರು. ಇದಕ್ಕೆ ವಿರಾಟ್‌ ಈ ಬಗ್ಗೆ ನೀವು ಮೊದಲು ನಿಮ್ಮ ತಂಡದ ಬೌಲರ್‌ಗಳ ಬಳಿ ಸಲಹೆಯನ್ನು ಪಡೆದು ಆ ನಂತರ ಮನವಿ ಸಲ್ಲಿಸಿ ಎಂದು ನಗುತ್ತೆ ವಿರಾಟ್‌ ರಾಹುಲ್‌ಗೆ ಸಲಹೆ ನೀಡಿದ್ರು.

ಇನ್ನು ಇದೇ ಪ್ರಶ್ನೆಗೆ ವಿರಾಟ್‌ ಉತ್ತರಿಸಿದ್ದು, ನಾನೊಬ್ಬ ತಂಡದ ನಾಯಕನಾಗಿ ಅವಕಾಶ ಸಿಕ್ಕರೆ ಆನ್‌ಫೀಲ್ಡ್‌ ಅಂಪೈರ್‌ ನೀಡುವ ವೈಡ್‌ ಅಥವಾ ನೋ ಬಾಲ್‌ ತೀರ್ಪನ್ನು ಮರು ಪರಿಶೀಲಿಸಲು ಅವಕಾಶ ಕೊಡಬೇಕೆಂಡು ಕೇಳುತ್ತೇನೆ. ಯಾಕಂದರೆ ಯಾವುದಾದರೊಂದು ಪಂದ್ಯವನ್ನು ನಾನು ಒಂದು ರನ್‌ನಿಂದ ಸೋತರೆ ಅದೇ ಪಂದ್ಯದಲ್ಲಿ ಅಂಪೈರ್‌ ಕೊಟ್ಟ ಕೆಟ್ಟ ತೀರ್ಪು ಆ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಿರುತ್ತದೆ. ಹಾಗಾಗಿ ಅಂಪೈರ್‌ ತೀರ್ಪು ಪರಿಶೀಲಿಸುವ ಒಂದು ಅವಕಾಶ ನೀಡುವಂತೆ ಕೇಳುವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ ಈ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಅಂಪೈರ್‌ ನೀಡಿದ ಕೆಟ್ಟ ತೀರ್ಪಿನಿಂದ ನಾವು ಸೋಲು ಕಾಣಬೇಕಾಯ್ತು. ಆದ್ದರಿಂದ ಇಂತಹ ನಿಯಮ ಬರಬೇಕು ಎಂದು ರಾಹುಲ್‌ ಕೂಡ ಹೇಳಿದ್ರು..

ಈ ವಿಚಾರವಾಗಿ ನೀವ್‌ ಏನ್‌ ಹೇಳ್ತೀರಾ..ವಿರಾಟ್‌ ಮತ್ತು ರಾಹುಲ್‌ ಹೇಳಿದ ರೀತಿ ರೂಲ್ಸ್‌ ಕ್ರಿಕೆಟ್‌ನಲ್ಲಿ ಬರಬೇಕಾ ಬೇಡ್ವಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top