ಅಂಗಡಿಯಲ್ಲಿ ಕುಳಿತಿದ್ದ ಮಹಿಳೆ ಮುಂದೆ ಪ್ಯಾಂಟ್ ಬಿಟ್ಟಿ ಹಸ್ತಮೈಥುನ ಮಾಡಿದ ಯುವಕ

ತಮ್ಮ ಅಂಗಡಿಯಲ್ಲಿ ಕ್ಯಾಶ್ ಕೌಂಟರ್‍ನಲ್ಲಿ ಕುಳಿತಿದ್ದ ಮಹಿಳೆ ಮುಂದೆ ಯುವಕನೊಬ್ಬ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ನಡೆದಿಕೊಂಡಿರೋ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಉತ್ತರಪ ಬಡಾವಣೆಯಲ್ಲಿರೋ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ಮಾಲೀಕ ಅಂಗಡಿಗೆ ವಸ್ತುಗಳನ್ನು ತರಲು ಹೋಗಿದ್ದರಿಂದ ಪತ್ನಿ ಅಂಗಡಿ ನೋಡಿಕೊಳ್ಳುತ್ತಿದ್ದರು, ಈ ವೇಳೆ ಬಂದ ಯುವಕ ಅಂಗಡಿಯಲ್ಲಿ ಮಹಿಳೆಯೊಬ್ಬಳೆ ಇದ್ದಾಳೆ ಎಂದು ತಿಳಿದು, ಅಂಗಡಿಯೊಳಗೆ ಬಂದ ಕಾಮುಕ ಯುವಕ ಪ್ಯಾಂಟ್ ಬಿಚ್ಚಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡು ಪರಾರಿಯಾಗಿದ್ದಾನೆ. ಮಹಿಳೆ ಭಯಗೊಂಡು ಮೊಬೈನಲ್ಲಿ ಯುವಕನ ಫೋಟೋ ತೆಗೆದುಕೊಂಡಿದ್ದಾರೆ. ನಂತ ರಪತಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸಿಟಿ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಇನ್ನು ಯುವಕನಿಗೆ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top