
ರಾಯಾಚೂರು ಜಿಲ್ಲೆಯ ಲಿಂಗಸುಗೂರಿನ ಪೈಡೊಡ್ಡಿಯಲ್ಲಿ ಅಂಕಲ್ ಜೊತೆಯಲ್ಲಿ ಅಪ್ರಾಪ್ತೆಯ ಲವ್ಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
17 ವರ್ಷದ ಹುಡುಗಿ ಎರಡು ಮಕ್ಕಳ ತಂದೆಯೊಂದಿಗೆ ಲವ್ ಆಗಿದ್ದು, ಈ ಪ್ರೀತಿ ಸಂಬಂಧಕ್ಕೆ ಮನೆಯವರಲ್ಲಿ ವಿರೋಧ ವ್ಯಕ್ತವಾಗಿದೆ,ಇದರಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಅದರಂತೆ ಇಬ್ಬರು ವಿಷ ಸೇವಿಸಿದ್ದಾರೆ, ಇದರ ಪರಿಣಾಮ ಹುಡುಗಿ ಸಾವನ್ನಪ್ಪಿದ್ದು, ಅಂಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪ್ರಾಪ್ತೆ ಯುವತಿಯನ್ನು ಅಂಕಲ್ ನರಸಪ್ಪನಿಂದ ದೂ ಮಾಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು, ಅಲ್ಲಿಂದ ಹೊರ ಬಂದನಂತರದಲ್ಲಿ ಯುವತಿ ನರಸಪ್ಪನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಈ ಜೋಡಿ ನಮ್ಮ ಉಂಗುರು ಹಣ, ಎಟಿಎಂ ಅನ್ನು ನಮ್ಮ ಮಕ್ಕಳಿಗೆ ನೀಡಿ ಎಂದು ಚೀಟಿ ಬರೆದು ಮುಂದಿನ ಜನ್ಮದಲ್ಲಿ ನಾವೀಬ್ಬರು ಗಂಡ ಹೆಂಡತಿ ಆಗುತ್ತೇವೆ ಬರೆದಿಟ್ಟು ವಿಷ ಸೇವಿಸಿದ್ದಾರೆ. ಇನ್ನು ಕೈ ಮೇಲೆ ಒಬ್ಬರಿಗೊಬ್ಬರು ಹೆಸರನ್ನು ಬರೆದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದು ಯುವತಿ ಸಾವನ್ನಪ್ಪಿದ್ದಾಳೆ , ನರಸಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.