ಅಂಕಲ್ಸ್‌ನ ಹೊಡಿಬೇಕು ಸುಬ್ಬಿ ಎಂದ RCB ಫ್ಯಾನ್ಸ್‌..!

ಐಪಿಎಲ್‌ ಶುರುವಾಗೋಕೆ ಇನ್ನು ಕೇವಲ ೧೦ ದಿನ ಬಾಕಿ ಇದೆ, ಈಗಾಗಲೇ ಐಪಿಎಲ್‌ ಕ್ರೇಜ್‌ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇನ್ನು ಆರ್‌ಸಿಬಿ ಮೇಲೆ ಈ ಬಾರಿ ಕಪ್‌ ಗೆಲ್ಲುವ ಫೆವರೇಟ್‌ ತಂಡ ಅಂತ ಹೇಳಲಾಗುತ್ತಿದೆ. ಇದರ ನಡುವೆ ಆರ್‌ಸಿಬಿ ಪ್ರಾಂಚೈಸಿಗಳು ತಮ್ಮ ಅಫಿಶಿಯಲ್‌ ಪೇಜ್‌ನಲ್ಲಿ ಆರ್‌ಸಿಬಿ ಬಗ್ಗೆ ಒಂದಿಲ್ಲೊಂದು ಪೋಸ್ಟ್‌ ಹಾಕ್ತಾನೆ ಇರ್ತಾರೆ.

ಇದೀಗ ಆರ್‌ಸಿಬಿ ಆಫಿಶಿಯಲ್‌ ಪೇಜ್‌ನಲ್ಲಿ ʻದೇವದತ್‌ ಪಡಿಕಲ್‌ʼ ಮತ್ತು ʻಪವನ್‌ ದೇಶ್‌ಪಾಂಡ್‌ʼಫೋಟೋ ಹಾಕಿ ಕನ್ನಡದಲ್ಲಿ ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? ಅಂತ ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಆರ್‌ಸಿಬಿ ಅಭಿಮಾನಿಗಳು ತರಹೇವಾರಿ ಕಾಮೆಂಟ್‌ಗಳನ್ನ ಮಾಡಿದ್ದಾರೆ. ಇನ್ನು ಕೆಲವ್ರು ಇವರಿಬ್ಬರ ಫಸ್ಟ್‌ ಪ್ಲೇಯಿಂಗ್‌ ೧೧ನಲ್ಲಿ ಆಡ್ಸಿ ಅಂತ ಹೇಳಿದ್ರೆ..ಸಿಎಸ್‌ಕೆ ಟೀಂನ ಚಚ್ಚಿ ಬಿಸಾಕ್ರೋ ಅಂತ ಕೆಲವ್ರು ಹೇಳಿದ್ದಾರೆ..ಇದೆಲ್ಲದಕಿಂತ ವಿಶೇಷ ಅಂದ್ರೆ ಟಗರು ಸಿನಿಮಾದ ಡೈಲಾಗ್‌ ಧನಂಜಯ್‌ ಅಂಕಲ್‌ನ ಹೊಡಿತೀನಿ ಸುಬ್ಬಿ ಅನ್ನ ಡೈಲಾಗ್‌ನ ಕಾಮೆಂಟ್‌ ಮಾಡಿದ್ದು,

ಅಂಕಲ್ಸ್‌ನ ಹೊಡಿಬೇಕು ಸುಬ್ಬಿ ಅಂತ ಕಾಮೆಂಟ್‌ ಮಾಡಿದ್ದಾರೆ ಸದ್ಯ ಈ ಕಾಮೆಂಟ್‌ ಆರ್‌ಸಿಬಿ ಫ್ಯಾನ್ಸ್‌ ಸಖತ್‌ ಟ್ರೆಂಡ್‌ ಕೂಡ ಮಾಡ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top