
ಲಾಕ್ಡೌನ್ಗೂ ಮುಂಚೆ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡಿದ ಸಿನಿಮಾ ಅಂದ್ರೆ ದಿಯಾ ಮತ್ತು ಲವ್ಮಾಕ್ಟೇಲ್.. ಆ ಸಿನಿಮಾದಲ್ಲಿ ಹೆಚ್ಚು ಆಕರ್ಷಿತವಾದ ಪಾತ್ರವಂದ್ರೆ ಅದು ದಿಯಾ ಆದಿ ಮತ್ತು ಲವ್ಮಾಕ್ಟೇಲ್ನ ನಿಧಿಮಾ, ಈ ಎರಡು ಪಾತ್ರಗಳನ್ನು ಮಾಡಿದ ನಟ ಮತ್ತ ನಟಿ ಇದೀಗ ಜೋಡಿಯಾಗುತ್ತಿದ್ದಾರೆ. ಆದ್ರೆ ಅವರು ಜೋಡಿ ಆಗ್ತಾ ಇರೋದು ರಿಯಲ್ ಲೈಫ್ನಲ್ಲಿ ಅಲ್ಲ ಬದಲಿಗೆ ರೀಲ್ ಲೈಫ್ನಲ್ಲಿ ಅಂದ್ರೆ ಮುಂದಿನ ಸಿನಿಮಾದಲ್ಲಿ ದಿಯಾದ ಆದಿ ಅಂದ್ರೆ ಪೃಥ್ವಿ ಅಂಬರ್ ಮತ್ತು ನಿಧಿಮಾ ಮಿಲನ ನಾಗರಾಜ್ ಅವ್ರು ʻಫಾರ್ ರಿಜಿಸ್ಟ್ರೇಷನ್ʼ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದಾರೆ.
ʻಫಾರ್ ರಿಜಿಸ್ಟ್ರೇಷನ್ʼ ಸಿನಿಮಾ ಪೃಥ್ವಿ ಅವರ ಮುಂದಿನ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿದ್ದರು, ಈ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿತ್ತು, ಇದೀಗ ಈ ಚಿತ್ರಕ್ಕೆ ಪೃಥ್ವಿ ಅಂಬರ್ಗೆ ಜೋಡಿಯಾಗಿ ಮಿಲನ ನಾಗರಾಜ್ ಕಾಣಿಸಿಕೊಳ್ತಾ ಇದ್ದಾರೆ.
ಸ್ವಲ್ಪ ದಿನಗಳ ಹಿಂದೆ ʻಫಾರ್ ರಿಜಿಸ್ಟ್ರೇಷನ್ʼ ಚಿತ್ರತಂಡ ಒಂದು ಪೋಸ್ಟ್ ಹಾಕಿ ನಾಯಕಿಯಾರು ಅನ್ನೋದನ್ನ ಗೆಸ್ ಮಾಡುವಂತೆ ಹೇಳಿತ್ತು. ಇದೀಗ ಆ ನಾಯಕಿ ಮಿಲನ ನಾಗರಾಜ್ ಅನ್ನೋದು ಕನ್ಫರ್ಮ್ ಆಗಿದೆ.