ಈ ಊರಿಗೆ ನಟ ಯಶ್ ದೇವರಿದ್ದಂತೆ..!

ಈ ಊರಿಗೆ ನಟ ಯಶ್ ದೇವರಿದ್ದಂತೆ..!

ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ಯಶ್ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡಿರುವ ವ್ಯಕ್ತಿ. ಯಶೋಮಾರ್ಗ ಮೂಲಕ‌ ಹಲವಾರು ಸಮಾಜದ ಒಳಿತಿಗಾಗಿ‌ ದುಡಿಯುತ್ತಿರುವ ನಟ ಯಶ್, ಉತ್ತರ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಿಗೆ ನೀರು ನೀಡುವ ಮೂಲಕ ಅಲ್ಲಿನ ಜನರ ಜೀವನದ ಭಗೀರಥನಾಗಿದ್ದಾರೆ, ಹೌದು ಕಳೆದ ವರುಷ ಕೊಪ್ಪಳದ ತಲ್ಲೂರು ಕೆರೆಯ ಹೂಳೆತ್ತುವ ಮೂಲಕ ಅಲ್ಲಿ‌ನ ಜನರ ನೀರಿನ ಭವಣೆಯನ್ನು ನೀಗಿಸಿದ್ರು, ಈ ಬಾರೀ ಕರ್ನಾಟಕದಲ್ಲಿ ಹಿಂದೆದಿಗಿಂತ ಭೀಕರ ಬರಗಾಲವಿದ್ದು ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ, ಈ ನಡುವೆ ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೇ ಹೋದರು ನೀರು ಸಿಗಂದಹ ಪರಿಸ್ಥತಿ ಉಂಟಾಗಿದೆ, ಇನ್ನು ಇದಕ್ಕೆ ಉತ್ತರ ಕರ್ನಾಟಕ ಹೊರತಾಗಿಲ್ಲ ಒಂದೊಂದು ಹನಿ‌ ನೀರಿಗೂ ಪರದಾಡುವ ಉತ್ತರ ಕರ್ನಾಟಕದ ಜನತೆಗೆ ಯಶ್ ನೀರು ನೀಡಿದ ಪುಣ್ಯಾತ್ಮನಾಗಿದ್ದಾರೆ.

ಹೌದು ಉತ್ತರ ಕರ್ನಾಟಕದ ರಾಯಚೂರು, ಬೀದರ್ ಜಿಲ್ಲೆಯ ಹಲವಾರು ಗ್ರಾಮಗಳಿಗೆ ಯಶೋಮಾರ್ಗ ಮೂಲಕ ನೀರಿನ ಟ್ಯಾಂಕರ್ ನಿಂದ ಸುತ್ತಮುತ್ತಲಿಗೆ ಗ್ರಾಮಗಳಿಗೆ ನೀರು ಪೂರೈಕೆ ಮಾಡೋ ಮೂಲಕ ಅಲ್ಲಿನ ಜನರ ಬಾಯಾರಿಕೆಯನ್ನು ನೀಗಿಸಿದ್ದಾರೆ, ಬೇಸಿಗೆಯ ಬವಣೆಯಿಂದ ಬಳಲುತ್ತಿರೋ ಉತ್ತರ ಕರ್ನಾಟಕದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್, ಹೀಗಾಗಿ ರಾಯಚೂರು,ಬೀದರ್ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಸ್ಥರು ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಲ್ಲ ಅವರು ನಮ್ಮೂರಿನ ದೇವರು ಅಂತ ಬೀದರ್ ,ರಾಯಚೂರಿನ‌ ಜನ ಹೇಳ್ತಿದ್ದಾರೆ.

yash yashomarga
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top