Smule Appನಲ್ಲಿ ತನ್ನ ಜೊತೆ ಹಾಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಗೃಹಿಣಿ.!

ಸಾವನ್ನು ಯಾವ್ಯವ ರೀತಿ ತರಿಸಿಕೊಳ್ತಾರೆ ನೋಡಿ, ಚಿತ್ರ ವಿಚಿತ್ರ ರೀತಿ ಆತ್ಮಹತ್ಯೆಯನ್ನು ಮಾಡಿಕೊಂಡಿರೋ‌ ಉದಾಹರಣೆಗಳನ್ನು ನಾವು‌ ಹಲವು ಬಾರಿ ಕೇಳಿರ್ತಿವಿ, ಆದ್ರೆ ಇಲ್ಲೊಬ್ಬ ಗೃಹಿಣಿ ಸ್ಮೂಲ್ ಆ್ಯಪ್‍ನಲ್ಲಿ ಪರಿಚಿತನಾಗಿದ್ದ ವ್ಯಕ್ತಿಯೋರ್ವ ಇತ್ತೀಚೆಗೆ ತನ್ನ ಜೊತೆಗೆ ಹಾಡುತ್ತಿಲ್ಲ ಎಂದು ಬೇಸರಗೊಂಡು ಹಾಡುತ್ತಾ ಹಾಡುತ್ತ ನೇಣಿಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸ್ಮ್ಯೂಲ್‌ ಎಂಬ ಸಾಮಾಜಿಕ ಜಾಲತಾಣ ಆ್ಯಪ್ ನಲ್ಲಿ ಗೃಹಿಣಿ ಶಿಲ್ಪಾ ಮತ್ತು ಹಾಸನದ ದೇವರಾಜ್ ಹಾಡುತ್ತಾ ಹಾಡುತ್ತಾ ಪರಿಚಯವಾಗಿದ್ದರು.

ಶುಕ್ರವಾರ ತಡರಾತ್ರಿ ಗೃಹಿಣಿ ಶಿಲ್ಪಾ, ಯುವಕನಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದ್ದಾಗ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ ತನ್ನನ್ನು ನೀನು ದೂರ ಮಾಡುತ್ತಿದ್ದೀಯಾ ಎಂದು ಮೆಸೇಜ್ ಮಾಡಿದ್ದಾಳೆ. ಹೀಗೆ ಇಬ್ಬರ ನಡುವೆ ಚಾಟಿಂಗ್ ಮುಂದುವರಿದಿದೆ. ಚಾಟಿಂಗ್ ಮಾಡುತ್ತಿದ್ದಾಗಲೇ ಶಿಲ್ಪಾ ಸಾಯುವುದಾಗಿ ಹೇಳಿ ಯುವಕನಿಗೆ ನೇಣಿನ ಫೋಟೋವೊಂದನ್ನು ಕಳುಹಿಸಿದ್ದಾಳೆ. ಫೋಟೋ ಕಳುಹಿಸಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಮೃತ ಶಿಲ್ಪಾ ಇಬ್ಬರು ಮಕ್ಕಳು‌ ಮತ್ತು ಗಂಡನನ್ನು ಬಿಟ್ಟು ನೇಣಿಗೆ ಶರಣಾಗಿದ್ದು‌ ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top