ಅಯ್ಯೋ ನನಗೆ ನಾಚಿಕೆಯಾಗುತ್ತೆ.!

rashmika feel shy to click pics

ಈಗಂತೂ ಸೆಲ್ಫಿ ಹಾವಳಿ ಎಲ್ಲೆ ಮೀರಿ ಹೋಗಿದೆ. ಎಲ್ಲೇ ಹೋಗ್ಲಿ ಸೆಲ್ಫಿ ಕ್ಲಿಕ್ ಮಾಡ್ದೆ ಇರೋದಿಲ್ಲ. ಇನ್ನು ತಮ್ಮ ಫೇಮಸ್ ಆಕ್ಟರ್ ಜೊತೆ ಸೆಲ್ಫಿ ತೆಗೆದುಕೊಳ್ಬೇಕು ಅಂದ್ರೆ ನಾಮುಂದು ತಾಮುಂದು ಅಂತ ಮುಗಿ ಬೀಳ್ತೀವಿ. ಆದ್ರೆ ಸ್ಯಾಂಡಲ್ ವುಡ್ ಕಿರಿಕ್ ಹುಡ್ಗಿ ರಶ್ಮಿಕಾ ಮಂದಣ್ಣಗೆ ಸೆಲ್ಫಿ ಅಂದ್ರೆ ಮಾರುದ್ದ ಓಡೋಗ್ತಾರಂತೆ. ಹೌದು.. ರಶ್ಮಿಕಾಗೆ ಫೋಟೋ ಸೆಲ್ಫಿ ಅಂದ್ರೆ ತುಂಬಾ ಮುಜುಗರವಂತೆ. ಗೀತಾ ಗೋವಿಂದಂ ನಂತ್ರ ಸಾಲು ಸಾಲು ಸಿನಿಮಾ ಮಾಡ್ತಿರೋ ಮಂದಣ್ಣ ಸದ್ಯ ಕೊಂಚ ರಿಲೀಫ್ ತೆಗೆದುಕೊಂಡಿದ್ರು. ತಮ್ಮ ನೆಚ್ಚಿನ ತಾಣ ಲಂಡನ್ ನಲ್ಲಿ ಸಖತ್ ಎಂಜಾಯ್ ಮಾಡಿದ್ರು. ಇದೀಗ ಲಂಡನ್ ನಿಂದ ಭಾರತಕ್ಕೆ ವಾಪಸ್ ಆಗಿರುವ ಮಂದಣ್ಣ ಅಲ್ಲಿ ತೆಗೆದ ಕೆಲವು ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು ಸೆಲ್ಫಿ ಫೋಟೋ ಅಂದ್ರೆ ನನಗೆ ಸ್ವಲ್ಪ ಮುಜುಗರ ಅಂತ ಹೇಳಿಕೊಂಡಿರೋ ಕಿರಿಕ್ ಬ್ಯೂಟಿ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಈ ಫೋಟೋವನ್ನು ಹಾಕಿದ್ದೀನಿ ಅಂತ ಬರೆದುಕೊಂಡಿದ್ದಾರೆ.. ಈ ಫೋಟೋವನ್ನು ಲಂಡನ್ ನಲ್ಲಿ ನನ್ನ ಗೆಳತಿ ಸನ್ಮತಿ ಕ್ಲಿಕ್ಕಿಸಿದ್ದು ಅಂತಾನೂ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top