ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ!

jds protest in hassan against preetham gowda

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ದ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ರಾಜಕಾರಣಿ ವಿರುದ್ಧ ಅವಹೇಳಕಾರಿ ಹೇಳಿ ನೀಡಿರುವುದನ್ನು ಖಂಡಿಸಿ ಹಾಸನದ ವಿದ್ಯಾನಗರದಲ್ಲಿರುವ ಶಾಸಕ ಪ್ರೀತಮ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೀತಂಗೌಡ ಅವರನ್ನು ಕೂಡಲೇ ಬಂಧಿಸಬೇಕು, ಆಕಸ್ಮಿಕವಾಗಿ ಶಾಸಕರಾಗಿರುವ ಪ್ರೀತಮ್ ಕೂಡಲೇ ರಾಜೀನಾಮೆ ನೀಡ್ಬೇಕು ಎಂದು ಆಗ್ರಹಿಸಿದ್ರು. ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧವೂ ಕಾರ್ಯಕರ್ತರು ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ಹಿರಿಯ ನಾಯಕರಿಗೆ ಹಗುರವಾಗಿ ಮಾತನಾಡಿರುವ ಪ್ರೀತಂ ಒಬ್ಬ ಪಾಪ ಪಾಂಡು ಎಂದು ಗೇಲಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top