ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಬೆಸ್ಟ್.! ಇಲ್ಲಿದೆ ನೋಡಿ ಎಕ್ಸಾಂಪಲ್.!

govt teachers kannada school

ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೇನೇ ಮೂಗು ಮುರಿಯೋರು ಜಾಸ್ತಿ, ಹೊಟ್ಟೆ ಹಿಟ್ಟಿಲ್ಲದಿದ್ರು ಮಕ್ಕಳನ್ನು ಮಾತ್ರ ದೊಡ್ಡ ದೊಡ್ಡ ಪ್ರೈವೇಟ್ ಶಾಲೆಗಳಲ್ಲೇ ಓದಿಸಬೇಕು ಅನ್ನೋದು ಪ್ರತಿಯೊಬ್ಬ ಪೋಷಕರ ಹಂಬಲ.. ಸರ್ಕಾರಿ ಶಾಲೆಗಳಲ್ಲಿ ಸವಲತ್ತಿರೋದಿಲ್ಲ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಸರಿಯಾಗಿ ನೀಡೋದಿಲ್ಲ ಅನ್ನೋ ಮಾತುಗಳನ್ನು ಆಡ್ತಾರೆ, ಇನ್ನು ಲಕ್ಷ ಲಕ್ಷ ಫೀಸ್ ಕೊಟ್ಟು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಪತಿಷ್ಟಿತ ಶಾಲೆಗಳಲ್ಲಿ ಓದಿಸಿದ್ರು ಅವರು ತೆಗೆಯೋ ಮಾಕ್ರ್ಸ್ ಅವರು ತೆಗೆದೆ ತೆಗೆಯುತ್ತಾರೆ. ಆದ್ರೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಯಾವುದೇ ಸವಲತ್ತುಗಳು ಸರಿಯಾಗಿ ಸಿಗುವುದಿಲ್ಲ ಅನ್ನೋ ಮಾತುಗಳಿವೆ.

ಆದರೆ ಪ್ರತಿಯೊಬ್ಬ ಮಗುವಿಗು ಏನೇ ಹೇಳಿ ಕೊಡಬೇಕಾದ್ರು ಆ ಮಗುವಿಗೆ ಅರ್ಥವಾಗುವ ರೀತಿ ಹೇಳಿಕೊಟ್ಟಾಗ ಮಾತ್ರ ಆ ಮಗು ಕಲಿಯಲು ಸಹಕಾರಿಯಾಗುತ್ತದೆ, ಆಗ ಮಾತ್ರ ಆ ಮಗು ತನ್ನ ಕಲಿಕೆಯಲ್ಲಿ ಆಸಕ್ತಿಯನ್ನು ಸಹ ತೋರಿಸುತ್ತದೆ, ಆ ಕೆಲಸವಾಗೋದು ಸರ್ಕಾರಿ ಶಾಲೆಗಳಿಂದ ಮಾತ್ರ ಅನ್ನೋ ಈ ಕೆಲವೊಂದು ವಿಡಿಯೋಗಳಿಂದ ಸಾಭೀತಾಗಿದೆ..

ಹೌದು `ಶಂಕರ್ ಉಪ್ಪಾರ್’ ಕೊಪ್ಪಳದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತನ್ನ ಶಾಲಾ ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಪಾಠ ಮಾಡೋ ಮೂಲಕ ಶಿಕ್ಷರಿಗೆ ಮಾದರಿಯಾಗಿದ್ದಾರೆ. ಕನ್ನಡದಲ್ಲಿ ಖ್ಯಾತ ರಿಯಾಲಿಟಿ ಷೋ ಆದ ಕನ್ನಡದ ಕೋಟ್ಯಾಧಿಪತಿ ಶೈಲಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವು ಮೂಲಕ ಮಕ್ಕಳಲ್ಲಿಯೂ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಧೈರ್ಯವನ್ನು ತುಂಬುತ್ತಿದ್ದರೆ, ವಿಭಿನ್ನ ರೀತಿ ಪಾಠ ಮಾಡುವ ಮೂಲಕ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸಿದ್ದಾರೆ.

ವಿಡಿಯೋ

ಇನ್ನು ನೆಲಮಂಗಲ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತನ್ನ ಮಕ್ಕಳಿಗೆ ಹಾಡನ್ನು ಹೇಳಿಕೊಡುತ್ತಿರುವ ಶೈಲಿಯನ್ನು ಲಕ್ಷ ಲಕ್ಷ ಫೀಸ್ ಕೀಳೋ ಯಾವ ಪ್ರೈವೇಟ್ ಶಾಲೆಯಲ್ಲಿಯೂ ಹೇಳಿಕೊಡಲು ಸಾಧ್ಯವಿಲ್ಲ, ಹೌದು ಮಕ್ಕಳ ಜೊತೆ ಸೇರಿ ತಾನು ಮಕ್ಕಳ ಜೊತೆ ಹೆಜ್ಜೆ ಹಾಕಿ ಮಕ್ಕಳಿಗೆ ಪಾಠ ಹೇಳಿಕೊಡುವ ಈ ಸರ್ಕಾರಿ ಶಾಲೆಯ ಶಿಕ್ಷಕಿ ವಿಭಿನ್ನವೇ ಸರಿ.

ವಿಡಿಯೋ

ಇದರ ಜೊತೆಯಲ್ಲಿ ಮಕ್ಕಳಿಗೆ ದಿನ ನಿತ್ಯ ನಮ್ಮ ಜೀವನದಲ್ಲಿ ನಡಿಯೋ ಘಟನೆಯನ್ನು ಸ್ವಾರಸ್ಯವಾಗಿ ಹೇಳಿಕೊಡಲು ಕೇವಲ ಈ ಸರ್ಕಾರಿ ಶಾಲೆಯ ಶಿಕ್ಷರಿಂದಲೇ ಸಾಧ್ಯ ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿ ಹೌದು ಗಂಡನ ಮೇಲೆ ಮುನಿಕೊಂಡ ಹೆಂಡತಿಯನ್ನು ತನ್ನ ಗಂಡ ಯಾವ ರೀತಿ ಸಮಾಧಾನ ಪಡಿಸುತ್ತಾನೆ ಅನ್ನೋದನ್ನ ಹಾಡಿನ ಜೊತೆ ನೃತ್ಯ ಮಾಡಿ ಮಕ್ಕಳಿಗೆ ಮನವರಿಕೆ ಮಾಡೋ ಈ ಶಿಕ್ಷಕರಿಗೆ ಸಲಾಂ ಹೇಳಲೇ ಬೇಕು.

ವಿಡಿಯೋ

ಇನ್ನು ಮಕ್ಕಳಲ್ಲಿ ಜಾನಪದದ ಸೊಗಡು ಉಳಿದುಕೊಂಡಿದೆ ಅಂದರೆ ಅದಕ್ಕೆ ಪ್ರಮುಖವಾದ ಅಂಶವೆಂದರೆ ಅದು ಸರ್ಕಾರಿ ಶಾಲೆಗಳು ಹೌದು ಮಕ್ಕಳಿಗೆ ಪಾಠದ ಜೊತೆಯಲ್ಲಿ ಜಾನಪದ ಸೊಗಡನ್ನು ಹೇಳಿಕೊಂಡುವ ಶಿಕ್ಷಕರು ಕೂಡ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇದ್ದಾರೆ ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿ.

ವಿಡಿಯೋ

ಇನ್ನು ಅ ಆ ಇ ಈ ಯನ್ನು ಸಹ ಈ ರೀತಿ ಹೇಳಿಕೊಡಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದು ಸಹ ನಮ್ಮ ಸರ್ಕಾರಿ ಶಾಲೆ ಅನ್ನೋದ್ರಲ್ಲಿ ಎರಡು ಮಾತಿಲ್ಲ, ತನ್ನ ಮಕ್ಕಳಿಗೆ ಅರ್ಥವಾಗೋ ರೀತಿ ಪಾಠ ಮಾಡಿದ್ರೆ ಯಾಕೆ ಮಕ್ಕಳು ಆಸಕ್ತಿಯನ್ನು ಕಲಿಯೋದಿಲ್ಲ ಅನ್ನೊದಕ್ಕೆ ಈ ವಿಡಿಯೋ ಸಾಕ್ಷಿ.

ವಿಡಿಯೋ

ಇದೆ ರೀತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿಭಿನ್ನ ರೀತಿ ಪಾಠಗಳನ್ನು ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಆಟದ ಜೊತೆಯಲ್ಲಿ ಓದಿನಲ್ಲಿಯೂ ಆಸಕ್ತಿ ಬರುವಂತೆ ಮಾಡುವ ಅದೆಷ್ಟೋ ಈ ರೀತಿಯ ಕ್ರಿಯಾಶೀಲ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ನಮ್ಮ ಶಿಕ್ಷಕರು ನೀಡ್ತಾ ಇದ್ದಾರೆ ಅನ್ನೋದು ಹೆಮ್ಮೆಯೇ ಸರಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top