Facebook & Instagram ಸೇರಿ 89 ಆಪ್ ‌ಗಳನ್ನು ತೆಗೆಯಲು ಸೂಚನೆ..!

ಭಾರತ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಬೆನ್ನಲ್ಲೇ ಈಗ ಭಾರತ ಮತ್ತೊಂದು ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತೀಯ ಸೇನಾ ಸಿಬ್ಬಂದಿಗೆ ಫೇಸ್‌ಬುಕ್‌,ಟಿಕ್‌ಟಾಕ್‌ ಸೇರಿದಂತೆ ಒಟ್ಟು 89 ಆ್ಯಪ್‌ಗಳನ್ನು ಮೊಬೈಲ್‌ನಿಂದ ತೆಗೆದು ಹಾಕುವಂತೆ ಸೂಚನೆಯನ್ನುನೀಡಲಾಗಿದೆ.

ದೇಶದ ಮಾಹಿತಿ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿ. ಭಾರತ ಸರ್ಕಾರ ಈಗಾಗಲೇ ಟಿಕ್‌ಟಾಕ್‌,ಕ್ಯಾಮ್‌ಸ್ಕ್ಯಾನರ್‌,ಯುಸಿ ಬ್ರೌಸರ್‌,ಶೇರ್‌ ಇಟ್‌ ಸೇರಿದಂತೆ ೫೯ ಪ್ರಮುಖ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಬೆನ್ನಲ್ಲೇ ಈಗ ಭಾರತೀಯ ಸೇನೆಗೆ ಈ ಒಂದು ಸೂಚನೆಯನ್ನು ನೀಡಿದ್ದು, ಸೇನೆಯಲ್ಲಿ ಸ್ಮಾರ್ಟ್‌ ಫೋನ್‌ಗಳಲ್ಲಿ ಬಳಸಲಾಗುವ ಇನ್ಸ್ಟಾಗ್ರಾಮ,ಫೇಸ್‌ಬುಕ್‌,ಸ್ನ್ಯಾಪ್‌ ಚಾಟ್‌ಗಳನ್ನು ಸಹ ಭಾರತೀಯ ಸೇನೆ ರಕ್ಷಣಾ ದೃಷ್ಟಿಯಿಂದ ತೆಗೆದುಹಾಕುವಂತೆ ಸೂಚನೆಯನ್ನು ನೀಡಿದೆ.

ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ದಕ್ಕೆಯಾಗುವ ರೀತಿಯಲ್ಲಿ ಚೀನಾದ ಕೆಲವು ಆಪ್‌ಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ 59 ಆಪ್‌ಗಳನ್ನು ಬ್ಯಾನ್‌ ಮಾಡಿದ್ದು, ಈಗ ದೇಶದ ರಕ್ಷಣೆಯ ದೃಷ್ಟಿಯಿಂದಾಗಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವರು ತಮ್ಮ ಮೊಬೈಲ್‌ಗಳಲ್ಲಿ ಇನ್ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌,ಸ್ನ್ಯಾಪ್‌ ಚಾಟ್‌ಗಳನ್ನು ತಮ್ಮ ಮೊಬೈಲ್‌ಗಳಿಂದ ಆನ್‌ ಇನ್ಸ್ಟಾಲ್‌ ಮಾಡಲು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಗಡಿಯಲ್ಲಿ ಚೀನಾ ಮತ್ತು ಭಾರತ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದು, ಭಾರತ ಚೀನಾಗೆ ತನ್ನ ಆಪ್‌ಗಳನ್ನು ಬ್ಯಾನ್‌ ಮಾಡುವ ಮೂಲಕ ಒಂದಿಷ್ಟು ಶಾಕ್‌ ನೀಡಿದೆ. ಸದ್ಯ ಸೇನೆಯಲ್ಲಿ ಚೀನೀ ಆಪ್‌ಗಳನ್ನು ಹೊರತು ಪಡಿಸಿ ಬೇರೆ ಆಪ್‌ಗಳನ್ನು ಆನ್‌ಇನ್ಸ್ಟಾಲ್‌ ಮಾಡಲು ಹೇಳುವ ಮೂಲಕ ದೇಶದ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top