ದರ್ಶನ್ ಅಭಿನಯದ ಒಡೆಯ ಚಿತ್ರಕ್ಕೆ ಕೊನೆಗೂ ಒಡತಿ ಸಿಕ್ಕಿದ್ದಾಳೆ!

darshan movie odeya heroine

ದರ್ಶನ್ ಅಭಿನಯದ ಒಡೆಯ ಚಿತ್ರಕ್ಕೆ ಕೊನೆಗೂ ಒಡತಿ ಸಿಕ್ಕಿದ್ದಾಳೆ.ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ, ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರ್ತಾ ಇರೋ ಈ ಸಿನಿಮಾ, ಇತ್ತಿಚೆಗೆ ಮೈಸೂರಿನಲ್ಲಿ ಮುಹೂರ್ತ ನೆರವೇರಿಸಿತ್ತು. ಈ ವೇಳೆ ದರ್ಶನ್ ಈ ಸಿನಿಮಾದಲ್ಲಿ ಎಲ್ಲ ವರ್ಗದಲ್ಲಿಯೂ ಕನ್ನಡಿಗರೇ ಕೆಲಸಮಾಡಲಿದ್ದಾರೆ ಅಂತ ಕೂಡ ಹೇಳಿದ್ರು. ಇನ್ನು ಒಡೆಯ ಸಿನಿಮಾಗೆ ಯಾರಾಗ್ತಾರೆ ಒಡತಿ ಅನ್ನೋ ಮಾತುಗಳು ಕೇಳಿಬರ್ತಾ ಇತ್ತು.ಈಗ ಕನ್ನಡಿತಿಯೇ ಈಗ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

Read : ಬಿಗ್ ಬಾಸ್ ಖ್ಯಾತಿಯ ಜಗನ್​ ಎಂಗೇಜ್ಮೆಂಟ್

Read : ಅಂಬಟಿ ರಾಯಡುಗೆ ಐಸಿಸಿಯಿಂದ ನಿಷೇಧ..!

Read : ಮತ್ತೆ ಬಿಕಿನಿಯಲ್ಲಿ ಕಾಣಿಸಿಕೊಂಡ ಕಿರಿಕ್ ಹುಡುಗಿ..!

ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ಎಂಬ ಮಾಡೆಲ್ ಈಗ ಒಡೆಯನ ಚೆಲುವೆಯಾಗಿ ಆಯ್ಕೆಯಾಗಿದ್ದಾರೆ. ಇನ್ನು ವೀರಂ ಚಿತ್ರದಲ್ಲಿ ತ್ರಿಷಾ ನಿರ್ವಹಿಸಿದ್ದ ಪಾತ್ರವನ್ನು ರಾಘವಿ ನಿರ್ವಹಿಸಲಿದ್ದಾರೆ. ಈಗಾಗ್ಲೇ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು ಯಜಮಾನ ರಿಲೀಸ್ ಬೆನ್ನಲ್ಲೇ ಒಡೆಯ ಚಿತ್ರವನ್ನು ರಿಲೀಸ್ ಮಾಡೋ‌ ಪ್ಲಾನ್ ನಲ್ಲಿದೆ ಚಿತ್ರತಂಡ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top