ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಡಿಯೋ ಬಿಡುಗಡೆ – ಯಾವ ವಿಡಿಯೋ ಗೊತ್ತಾ..?

darshan in africa kenya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಮಾಡಿದ್ರು ಸುದ್ದಿನೇ, ಇನ್ನು ದರ್ಶನ್ ಅಂದ್ರೆ ಅಭಿಮಾನಿಗಳು ಸಹ ಎಲ್ಲಿಲ್ಲದ ಪ್ರೀತಿ, ನಮ್ಮ ಡಿ ಬಾಸ್ ಇವತ್ತು ಏನ್ ಮಾಡ್ತಿದ್ದಾರೆ, ಎಲ್ಲಿದ್ದಾರೆ, ಯಾವ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ ಅನ್ನೋ ವಿಷಯವನ್ನು ತಿಳಿಯಲು ಸದಾ ಕಾಯ್ತಾ ಇರ್ತಾರೆ, ನಿನ್ನೆ ಕೀನ್ಯಾದಿಂದ ವಾಪಾಸ್ ಬೆಂಗಳೂರಿಗೆ ಬಂದಿರೋ ಡಿ ಬಾಸ್ ಈಗ ಅಭಿಮಾನಿಗಳಿಗೆ ಒಂದು ಸಖತ್ ಗಿಫ್ಟ್ ಅನ್ನೇ ಕೊಟ್ಟಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾದ ಮಸೈ ಮರಾ ಸಫಾರಿಯಲ್ಲಿ' ಓಡಾಡಿದ ಒಂದಿಷ್ಟು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಇನ್ನು ಪ್ರಾಣಿ ಪ್ರಿಯರಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಫಾರಿ ಮಾಡುವ ವೇಳೆ ಒಂದಿಷ್ಟು ಫೋಟೋಗಳನ್ನು ಸಹ ಕ್ಲಿಕ್ಕಿಸಿದ್ದಾರೆ. ಇದಲ್ಲದೆ ಒಂದು ಗುಚ್ಛವನ್ನು ಈಗ ಅಭಿಮಾನಿಗಳಿಗಾಗಿ ನೀಡಿದ್ದಾರೆ.ಮಸೈ ಮರಾ ಸಫಾರಿ’ಯಲ್ಲಿ ತಾವು ಓಡಾಡಿದ ಮತ್ತು ಅಲ್ಲಿನ ಜನರ ಜೊತೆ ಕಾಲ ಕಳೆದ ಒಂದಿಷ್ಟು ವಿಡಿಯೋಗಳನ್ನು ಯೂಟ್ಯೂಬ್‍ನಲ್ಲಿ ಬಿಟ್ಟಿದ್ದು ಅಲ್ಲಿ ಕಳೆದ ಒಂದುಷ್ಟು ಸಂತಸದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top