ಪ್ರಾರ್ಥಿಸುವ ಎರಡು ಕೈಗಳಿಗಿಂತ ಸಹಾಯ ನೀಡುವ ಒಂದು ಕೈ ಮೇಲು..!

boy feeding classmate video went viral

ಯೆಸ್ ಜಗತ್ತಿನಲ್ಲಿ ಪ್ರಾರ್ಥಿಸುವ ಎರಡು ಕೈಗಳಿಗಿಂತ ಸಹಾಯ ನೀಡೋ ಒಂದು ಕೈ ಇದ್ರೆ ಎಂಥಹ ಸಮಸ್ಯೆ ಬರಲಿ‌, ಎಂಥಹ ಸವಾಲುಗಳೇ ಬರಲಿ ಎದುರಿಸಿ ಜಗತ್ತನ್ನೇ ಗೆಲ್ಲ ಬಹುದು. ಹೌದು ಈ ಮಾತಿಗೆ ನಿದರ್ಶನ ಎಂಬಂತೆ ಈ ಒಂದು ವಿಡಿಯೋ ಎಲ್ಲರಿಗೂ ಮಾದರಿಯಾಗಿದೆ ಹೌದು ಮಕ್ಕಳಲ್ಲಿ ನಾವು ದೇವರನ್ನು ಕಾಣುತ್ತೇವೆ ಅನ್ನೋ‌ ಮಾತಿದೆ. ಹಾಗೆ ಮಕ್ಕಳಿಂದ‌ ಅದೆಷ್ಟೋ ವಿಚಾರಗಳನ್ನು ನಾವು ಕಲಿಯುತ್ತೇವೆ ಅಂತೇವೆ. ಈ ಮಾತಿಗೆ ಸರಿ ಎನ್ನುವಂತೆ ಈ ವಿಡಿಯೋ ತುಣುಕು ಈಗ ಸಾಕ್ಷಿಯಾಗಿದೆ. ಶಾಲೆಯ ಯುವಕನೊಬ್ಬ ತನ್ನ ಸಹಪಾಠಿಗಳ ಜೊತೆ ಸರದಿಯಲ್ಲಿ ಊಟ ಮಾಡುವಗ ತನ್ನ ಪಕ್ಕದಲ್ಲೇ ಇದ್ದ ತನ್ನ ಸಹಪಾಠಿ ಸಹಾಯಕನಾಗಿ ಕುಳಿತಿದ್ದಾಗ ಆತನ‌ ಸಹಾಯಕ್ಕೆ ಬಂದು ಆತನ ಹಸಿವನ್ನು ನೀಗಿಸಿದ್ದಾನೆ. ತನ್ನ ಪಕ್ಕದಲ್ಲೇ ಕುಳಿತ ಸಹಪಾಠಿಗೆ ಊಟ ಮಾಡಿಸಿ, ತಾನು ಊಟ ಮಾಡೋ‌ ಮೂಲಕ ಎಲ್ಲರ ಗಮನವನ್ನು ತನ್ನೆಡೆ ಸೆಳೆಯುವಂತೆ ಮಾಡಿದ್ದಾನೆ. ಅದಕ್ಕೆ ಹೇಳೋದು ಮಕ್ಕಳನ್ನು ನೋಡಿ ದೊಡ್ಡವರು ಕಲಿಯೋದು ಬಹಳಷ್ಟಿದೆ ಎಂದು.

ಏನೇ ಆದ್ರೂ ಈ ಒಂದು ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಒಂದು ಸನ್ನಿವೇಶ ನೋಡಿದ ಮೇಲೆ ಎಲ್ಲರ ಮನಸಿನಲ್ಲೂ ಅನಿಸೋದು ಪ್ರಾರ್ಥಿಸುವ ಎರಡು ಕೈಗಳಿಗಿಂತ ಸಹಾಯ ನೀಡುವ ಒಂದು ಕೈ‌ಮೇಲು ಅನ್ನೋದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top