ಕನ್ನಡದಲ್ಲಿ ಬರ್ತಾ ಇದೆ ಬಾಹುಬಲಿ ಸಿನಿಮಾ..!

bahubali in kannada

ಬಾಹುಬಲಿ ಈ ಒಂದು ಸಿನಿಮಾ ಮಾಡಿದ ಮೋಡಿ ಅಂತಿದ್ದದಲ್ಲ, ಈ ಬಾಹುಬಲಿ 1 ಮತ್ತು ಬಾಹುಬಲಿ 2 ಮಾಡಿರೋ ದಾಖಲೆಗಳನ್ನು ಇದುವರೆಗೂ ಯಾವ ಸಿನಿಮಾ ಕೂಡ ಮುರಿಯಲು ಸಾಧ್ಯವಾಗಿಲ್ಲ, ಆದ್ರೆ ಈ ಮತ್ತೆ ಬಾಹುಬಲಿ ಸಿನಿಮಾ ಸೌಂಡ್‌ ಮಾಡಲು ರೆಡಿಯಾಗುತ್ತದೆ ಹೌದು, ಆದ್ರೆ ಈ ಬಾರಿ ಅದು ಸೌಂಡ್‌ ಮಾಡೋಕೆ ಬರ್ತಾ ಇರೋದು ತೆಲುಗು ಭಾಷೆಯಲ್ಲಿ ಅಲ್ಲ ಬದಲಿಗೆ ಕನ್ನಡದ ಭಾಷೆಯಲ್ಲಿ. ಹೌದು ಕೊರೋನಾ ಹಾವಳಿಯಿಂದ ಲಾಕ್‌ಡೌನ್‌ ಆದ ಬಳಿಕ ಕಿರುತೆರೆಯಲ್ಲಿ ಒಂದುಷ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಲು ಶುರುವಾಗಿದೆ,

ಅದರಲ್ಲಿ ಪ್ರಮುಖವಾದದ್ದು ಅಂದ್ರೆ ಅದು ಡಬ್ಬಿಂಗ್‌, ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಹಲವು ಸಿನಿಮಾಗಳು ಮತ್ತು ಧಾರಾವಾಹಿಗಳು ಡಬ್ಬಿಂಗ್‌ ಆಗಿ ಪ್ರಸಾರವಾಗುತ್ತಿದೆ, ಇನ್ನು ಲಾಕ್‌ಡೌನ್‌ ಟೈಂನಲ್ಲಿ ಒಂದಿಷ್ಟು ಗಮನವನ್ನು ಸಹ ಸೆಳೆದಿದೆ, ಕನ್ನಡದಲ್ಲಿ ಡಬ್ಬಿಂಗ್‌ ವಿಚಾರವಾಗಿ ಒಂದಿಷ್ಟು ಭಿನ್ನಾಭಿಪ್ರಾಯಗಳು ಇದ್ದರು, ಟೆಲಿವಿಷನ್‌ ರೇಟಿಂಗ್‌ ವಿಚಾರದಲ್ಲಿ ಡಬ್ಬಿಂಗ್‌ ಧಾರಾವಾಹಿ ಮತ್ತು ಸಿನಿಮಾಗಳು ಹೆಚ್ಚು ರೆಟಿಂಗ್‌ ಪಡೆಯುವ ಮೂಲಕ ದಾಖಲೆಯನ್ನು ಬರೆಯುತ್ತಿದೆ. ಹೀಗಿರುವಾಗ ಈಗ 5 ವರ್ಷಗಳ ನಂತರ ಬಾಹುಬಲಿ ಸಿನಿಮಾ ಕನ್ನಡದಲ್ಲಿ ಡಬ್‌ ಆಗುವ ಮೂಲಕ ಕನ್ನಡ ಸಿನಿರಸಿಕರನ್ನು ರಂಜಿಸಲು ಬರ್ತಾ ಇದೆ. ಹೌದು 2015ರಲ್ಲಿ ಬಿಡುಗಡೆಯಾಗಿ ಬಾಲಿವುಡ್‌ ಅಲ್ಲದೇ ಹಾಲಿವುಡ್‌ನಲ್ಲೂ ಸೌಂಡ್‌ ಮಾಡಿದ್ದ ಬಾಹುಬಲಿ ಸಿನಿಮಾ ಈಗ ಕನ್ನಡದಲ್ಲಿ ಡಬ್‌ ಆಗಿ ಪ್ರಸಾರವಾಗಲ್ಲೂ ಎಲ್ಲಾ ತಯಾರಿಗಳನ್ನು ಮಾಡಿಕೊಳ್ತಾ ಇದೆ.

ಈ ಹಿಂದೆ ಬಾಹುಬಲಿ 2 ಸಿನಿಮಾ ರಿಲೀಸ್‌ ಆಗುವ ವೇಳೆ ಒಂದಷ್ಟು ಡಬ್ಬಿಂಗ್‌ ಪರ ವಾದ ಮಾಡುತ್ತಿದ್ದವರು ಬಾಹುಬಲಿ ಕನ್ನಡದಲ್ಲಿ ಡಬ್‌ ಆಗಿ ಬರಲಿ ಅನ್ನೋ ಅಭಿಯಾನವನ್ನು ಮಾಡಿದ್ರು, ಆದ್ರೆ ಈಗ ಬಾಹುಬಲಿ ರಿಲೀಸ್‌ ಆಗಿ 5 ವರ್ಷಗಳ ನಂತರ ಆ ಸಿನಿಮಾ ಈಗ ಕನ್ನಡಕ್ಕೆ ಡಬ್‌ ಆಗಿ ಟೆಲಿವಿಷನ್‌ನಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್‌ ಸುವರ್ಣ ವಾಹಿನಿ ಬಾಹುಬಲಿ ಡಬ್ಬಿಂಗ್‌ ಸಿನಿಮಾದ ರೈಟ್ಸ್‌ ಪಡೆದಿದ್ದು ಅತೀ ಶಿಘ್ರದಲ್ಲಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಬಾಹುಬಲಿ ಕನ್ನಡ ಸಿನಿಮಾ ಪ್ರಸಾರವಾಗಲಿದೆ. ಈಗಾಗಲೇ ಚಿತ್ರ ಪ್ರೋಮೋ ಸ್ಟಾರ್‌ ಸುವರ್ಣ ಪ್ರಸಾರ ಮಾಡುತ್ತಿದ್ದು, ಅತೀ ಶಿಘ್ರದಲ್ಲಿ ಬರಲಿದೆ ಎಂದು ತಿಳಿದುಬಂದಿದೆ.

ಇನ್ನು ಈ ಹಿಂದೆ ಅಜಿತ್‌ ಅಭಿನಯದ ಜಗಮಲ್ಲ,ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ, ಕಾಂಚಾನ 3 ಚಿತ್ರಗಳು ಪ್ರಸಾರವಾಗಿ ದಾಖಲೆಯ ರೆಟಿಂಗ್‌ ಪಡೆದಿದ್ದನ್ನು ಇಲ್ಲಿ ನಾವು ಕಾಣಬಹುದಾಗಿದೆ.

ಈ ವಿಚಾರವಾಗಿ ಕನ್ನಡದಲ್ಲಿ ಡಬ್ಬಿಂಗ್‌ ಸಿನಿಮಾಗಳು ಮುಂದಿನ ದಿನಗಳಲ್ಲಿ ಥಿಯೇಟರ್‌ನಲ್ಲೂ ರಿಲೀಸ್‌ ಆಗ ಬೇಕಾ ಬೇಡವಾ ಎಂಬುದನ್ನು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top