ಪೊಲೀಸರಿಂದಲೇ ಎರಡು ಕೆಜಿ ಚಿನ್ನ ದರೋಡೆ..!

ಏನ್ ಕಾಲ ಬಂತು ನೋಡಿ ನಮ್ಮನ್ನು ರಕ್ಷಿಸುವವರೆ ನಮ್ಮನ್ನು ಭಕ್ಷಿಸಿದ್ರೆ ಏನಾಗುತ್ತೆ ಹೇಳಿ, ಅಂತಹದ್ದು ಒಂದು ಘಟನೆ ಪಂಜಾಬ್‍ನ ಅಮೃತ್‍ಸರದಲ್ಲಿ ನಡೆದಿದೆ, ಹೌದು ಬಲವಂತವಾಗಿ ನಾಲ್ವರನ್ನು ಪೊಲೀಸ್ ಸ್ಟೇಷನ್‍ಗೆ ಎಳೆದುಕೊಂಡು ಹೋಗಿ ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿದ್ದಾರೆ.
ದುಬೈನಿಂದ ಹಿಂದುರಿಗಿದ್ದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುವ ವೇಳೆ ಪೊಲೀಸರು ಅಡ್ಡಗಟ್ಟಿ, ನಾಲ್ವರು ಸ್ನೇಹಿತರನ್ನು ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲದೇ ಅವರ ಬಳಿ ಇದ್ದ 2 ಕೆಜಿ ಚಿನ್ನ ಹಾಗೂ ಬೆಲೆಬಾಳುವ ಸಾಮಾನುಗಳನ್ನು ಪೊಲೀಸರೇ ದರೋಡೆ ಮಾಡಿದ್ದಾರೆ.
4 ಜನ ಸ್ನೇಹಿತರು ರಾಜಸ್ಥಾನದ ನಾಗೌರ್ ನಿವಾಸಿಗಳಾಗಿದ್ದು, ಗುರುವಾರ ರಾತ್ರಿ ಅಮೃತಸರದಿಂದ ಮನೆಗೆ ಮರಳುತ್ತಿದ್ದ ವೇಳೆ ಪಂಜಾಬ್‍ನ ಬಟಿಂಡಾ ಬಳಿ ಮೌರ್ ಮಂಡಿಯ ಸ್ಟೇಷನ್ ಪೊಲೀಸ್ ಆಫಿಸರ್ ಪರಶನ್, ನಾಲ್ವರು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಾರಿನ ಒಳಗಡೆ ಏನಿದೆ ಎಂದು ಹುಡುಕಿ ಅಂತ ತನ್ನ ಸಹಚರರಿಗೆ ಹೇಳಿದ್ದಾನೆ. ಈ ವೇಳೆ ಕಾರಿನಲ್ಲಿ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳು ಇರುವುದು ಕಂಡು ಬಂದಿದೆ. ಆಗ ನಾಲ್ವರು ಸ್ನೇಹಿತರರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಅವರನ್ನು ನಾಲ್ಕು ಗಂಟೆಗಳ ನಂತರ ಹೊರಗೆ ಬಿಟ್ಟಿದ್ದಾರೆ, ಆದರೆ ದುಬೈನಿಂದ ತಂದಿದ್ದ ಹಲವು ವಸ್ತುಗಳನ್ನು ಪೊಲೀಸರೇ ತೆಗೆದುಕೊಂಡಿದ್ದು ಜೊತೆಗೆ 2 ಕೆಜಿ ಚಿನ್ನ ಕೂಡ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಆಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅರೋಪಿಗಳ ವಿರುದ್ಧ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದ್ದು. ಸ್ಟೇಷನ್ ಹೌಸ್ ಆಫೀಸರ್ ಪರಶನ್,ಗನ್ ಮ್ಯಾನ್ ಹವಾಲ್ದಾರ್,ಅವತಾರ್ ಸಿಂಗ್ ಹಾಗೂ ಅನುಪ್ ಎಂಬುವವರನ್ನು ಬಂಧಿಸಿದ್ದಾರೆ. ಆದ್ರೆ ಚಿನ್ನ ಮತ್ತು ಬೆಲೆಬಾಳುವ ವಸ್ತುಗಳು ಮಾತ್ರ ಇನ್ನು ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top