ಈ ಜೋಡಿ ನೋಡಿ ಶಾಕ್ ಆದ ಪುನೀತ್ ರಾಜ್‍ಕುಮಾರ್..!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇನ್ನು ಅಪ್ಪು ಜೊತೆ ಫೋಟೋ ತೆಗೆಸಿಕೊಳ್ಳಬೇಕು , ನಮ್ಮ ಕಾರ್ಯಕ್ರಮಕ್ಕೆ ಅಪ್ಪು ಬರಬೇಕು ಅನ್ನೋ ಆಸೆ ಅಪ್ಪು ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ, ಆದ್ರೆ ಇಲ್ಲೊಂದು ಅಪರೂಪದ ಅಭಿಮಾನಿಗಳನ್ನು‌ ನೋಡಿ ಸ್ವತಃ ಪುನೀತ್ ರಾಜ್‍ಕುಮಾರ್ ಶಾಕ್ ಆಗಿದ್ದಾರೆ. ಹೌದು ಸದ್ಯ ಪುನೀತ್ ರಾಜರತ್ನ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದು , ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ಮಾಡ್ತೀದೆ, ಈ ನಡುವೆ ಅಪ್ಪು ಅಭಿಮಾನಿ ಯೋಗೇಶ್ ಶೂಟಿಂಗ್ ಸ್ಥಳಕ್ಕೆ ಹೋಗಿ ಅಪ್ಪು ಅವರನ್ನು ಮದುವೆಗೆ ಆಹ್ವಾನಿಸಿದ್ರು ಆದ್ರೆ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದ ಅಪ್ಪು ಮದುವೆ ಕಾರ್ಯಕ್ಕೆ ಹೋಗಿರಿಲ್ಲ,ಆದ್ರೆ ಅಲ್ಲಿ ನಡೆದಿದ್ದೇ ಬೇರೆ.

ಹೌದು ಅಪ್ಪುವನ್ನು ಮದುವೆಗೆ ಆಹ್ವಾನಿಸಿದ್ದ ಅಭಿಮಾನಿ ಯೋಗೇಶ್ ಚೈತ್ರ ಅವರನ್ನು ಮದುವೆಯಾಗಿ ಸೀದಾ ಬಂದಿದ್ದು ಪುನೀತ್ ರಾಜ್‍ಕುಮಾರ್ ತೊಡಗಿದ್ದ ಶೂಟಿಂಗ್ ಸ್ಪಾಟ್ ಗೆ ,ಇನ್ನು ಪುನೀತ್ ಬಳಿ ಆಶೀರ್ವಾದ ಪಡೆಯಲು ಬಂದಿದ್ದ ಜೋಡಿಯನ್ನು ಒಂದು ಕ್ಷಣ ಪುನೀತ್ ಕೂಡ ಶಾಕ್ ಆಗಿದ್ರು, ಕಾರಣ ಈ ನವ ದಂಪತಿಗಳು ಮದುವೆ ಉಡುಗೆಯಲ್ಲೇ ಶೂಟಿಂಗ್ ನಡೆಯುತ್ತಿರುವ ಜಾಗಕ್ಕೆ ಬಂದಿದ್ರು, ಇನ್ನು ಈ ಇಬ್ಬರು ಜೋಡಿಗೆ ಪುನೀತ್ ಬಳಿ ಆಶೀರ್ವಾದ ಪಡೆಯ ಬೇಕು ಅನ್ನೋ ಆಸೆ ಕೂಡ ಇತ್ತು, ಅಭಿಮಾನಿಯ ಆಸೆಯಂತೆ ಪುನೀತ್ ಈ ಇಬ್ಬರು ಜೋಡಿಗೆ ಆಶಿರ್ವದಿಸಿ ಕಳುಹಿಸಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top